ADVERTISEMENT

ಯಾದಗಿರಿಯಲ್ಲಿ 16 ಮಂದಿಗೆ ಕೋವಿಡ್‌ ಪತ್ತೆ

1,043ಕ್ಕೆ ಕೋವಿಡ್‌ ಸೋಂಕಿತರ ಸಂಖ್ಯೆ, 876 ಜನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:45 IST
Last Updated 9 ಜುಲೈ 2020, 16:45 IST

ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ಮತ್ತೆ 16 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 1,043ಕ್ಕೆ ಏರಿಕೆಯಾಗಿದೆ.

24, 26, ವರ್ಷದ ಪುರುಷ,22, 65, 40,4, 80 ವರ್ಷದ ಮಹಿಳೆ ಸೇರಿದಂತೆ 16 ಜನರಲ್ಲಿಸೋಂಕು ಕಂಡು ಬಂದಿದೆ.ಸುರಪುರ ತಾಲ್ಲೂಕಿನ ದಿವಳಗುಡ್ಡ, ಸುಗೂರಿನ ಜನರಿಗೆ ಕೋವಿಡ್‌ ಪತ್ತೆಯಾಗಿದೆ. ಸುರಪುರದ 15, ವಡಗೇರಾ ತಾಲ್ಲೂಕಿನ ಒಬ್ಬರಿಗೆ ಸೋಂಕು ತಗುಲಿದೆ. 6 ಜನ ಪುರುಷ, 10 ಮಹಿಳೆಯರು ಸೇರಿದ್ದಾರೆ. ಒಬ್ಬರು ಮಾತ್ರ ಮಹಾರಾಷ್ಟ್ರದಿಂದ ಬಂದಿದ್ದರೆ ಇನ್ನುಳಿದವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. 166 ಪ್ರಕರಣಗಳು ಕ್ರಿಯಾಶೀಲವಾಗಿದ್ದು, 105 ಧಾರಕವಲಯ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT