ADVERTISEMENT

ಯಾದಗಿರಿಯಲ್ಲಿ ಮತ್ತೆ 67 ಜನರಿಗೆ ಕೋವಿಡ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 4:21 IST
Last Updated 11 ಆಗಸ್ಟ್ 2020, 4:21 IST

ಯಾದಗಿರಿ: ಜಿಲ್ಲೆಯಲ್ಲಿ 67 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಸೋಂಕಿತರ ಸಂಖ್ಯೆ 3,129ಕ್ಕೆ ಏರಿಕೆಯಾಗಿದೆ.

ಯಾದಗಿರಿ ತಾಲ್ಲೂಕಿನಲ್ಲಿ 20,ಶಹಾಪುರತಾಲ್ಲೂಕಿನಲ್ಲಿ 24, ವಡಗೇರಾ ತಾಲ್ಲೂಕಿನಲ್ಲಿ 8, ಸುರಪುರ ತಾಲ್ಲೂಕಿನಲ್ಲಿ 8, ಹುಣಸಗಿ ತಾಲ್ಲೂಕಿನಲ್ಲಿ 5, ಅಂತರ ಜಿಲ್ಲೆಯ 2 ಸೇರಿದಂತೆ 67 ಕೋವಿಡ್‌ ಪ್ರಕರಗಳು ಪತ್ತೆಯಾಗಿವೆ.438 ಸೋಂಕಿತ ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ 6, ಗುರುಮಠಕಲ್ ತಾಲ್ಲೂಕಿನಲ್ಲಿ 2, ಶಹಾಪುರ ತಾಲ್ಲೂಕಿನಲ್ಲಿ 7 ಜನ ಸೇರಿದಂತೆ 15 ಜನ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ ಯಾದಗಿರಿ ತಾಲ್ಲೂಕಿನಲ್ಲಿ 1,049, ಗುರುಮಠಕಲ್ ತಾಲ್ಲೂಕಿನಲ್ಲಿ 395, ಶಹಾಪುರ ತಾಲ್ಲೂಕಿನಲ್ಲಿ 428, ವಡಗೇರಾ ತಾಲ್ಲೂಕಿನಲ್ಲಿ 35, ಸುರಪುರ ತಾಲ್ಲೂಕಿನಲ್ಲಿ 185, ಹುಣಸಗಿ ತಾಲ್ಲೂಕಿನಲ್ಲಿ 42 ಸೇರಿದಂತೆ 2,134 ಸೋಂಕಿತರು ಗುಣಮುಖರಾಗಿದ್ದಾರೆ.

ADVERTISEMENT

ಯಾದಗಿರಿ ತಾಲ್ಲೂಕಿನಲ್ಲಿ 223, ಗುರುಮಠಕಲ್ ತಾಲ್ಲೂಕಿನಲ್ಲಿ 60, ಶಹಾಪುರ ತಾಲ್ಲೂಕಿನಲ್ಲಿ 281, ವಡಗೇರಾ ತಾಲ್ಲೂಕಿನಲ್ಲಿ 39, ಸುರಪುರ ತಾಲ್ಲೂಕಿನಲ್ಲಿ 222, ಹುಣಸಗಿ ತಾಲ್ಲೂಕಿನಲ್ಲಿ 152 ಸೇರಿದಂತೆ 977 ಸಕ್ರಿಯ ಪ್ರಕರಣಗಳಿವೆ.

ಕೋವಿಡ್‌ ಅಂಕಿ ಅಂಶ
ಜಿಲ್ಲೆಯಲ್ಲಿ ಒಟ್ಟು;3,129
ದಿನದ ಏರಿಕೆ;67
ಗುಣಮುಖ;15
ಸಕ್ರಿಯ:978
ಸಾವು;17

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.