ADVERTISEMENT

809 ರೈತರ ಖಾತೆಗಳಿಂದ ₹4.47 ಲಕ್ಷ ವಾಪಸ್‌

ಸಾಲ ಮನ್ನಾ ಹಣ ಜಮೆ ಮಾಡುವಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 15:51 IST
Last Updated 11 ಜೂನ್ 2019, 15:51 IST

ಯಾದಗಿರಿ: ಜಿಲ್ಲೆಯ 809 ರೈತರ ಖಾತೆಗೆ ಜಮೆ ಮಾಡಿದ್ದ ಸಾಲ ಮನ್ನಾದಒಟ್ಟಾರೆ ₹4.47 ಲಕ್ಷ ಹಣವನ್ನು ಬ್ಯಾಂಕ್‌ನವರು ವಾಪಸ್ಸು ಪಡೆದಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ‘ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಹಣ ವಾಪಸ್‌ ಪಡೆದುತಮ್ಮನ್ನು ವಂಚಿಸಿದೆ’ ಎಂದು ರೈತರು ದೂರುತ್ತಿದ್ದಾರೆ.

‘ಜಿಲ್ಲೆಯ69,965 ರೈತರುರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ. ಈ ಪೈಕಿ39,620 ರೈತರ ₹2.4 ಕೋಟಿ ಸಾಲ ಮನ್ನಾ ಆಗಿದೆ. 809 ರೈತರ ಖಾತೆಗೆ ಜಮೆ ಮಾಡಿದ್ದ₹4.47 ಲಕ್ಷ ಸಾಲ ಮನ್ನಾ ಹಣವನ್ನು ವಾಪಸ್‌ ಪಡೆಯಲಾಗಿದೆ’ ಎಂದು ಜಿಲ್ಲಾಲೀಡ್ ಬ್ಯಾಂಕ್ ವ್ಯವಸ್ಥಾಪಕಗೋಪಾಲ ರಾವ್ ತಿಳಿಸಿದರು.

‘ಸಾಲ ಮನ್ನಾಕ್ಕೆ ಅರ್ಹ ರೈತರ ಪಟ್ಟಿ ಕಳಿಸುವಾಗ ವ್ಯತ್ಯಾಸವಾಗಿತ್ತು. ಸುಸ್ತಿದಾರರು, ಸಾಲ ಮನ್ನಾಕ್ಕೆ ಅರ್ಹರಲ್ಲದ ರೈತರ ಹೆಸರುಗಳೂ ಸಹ ಈ ಪಟ್ಟಿಯಲ್ಲಿ ಇದ್ದವು. ಸಾಲ ಮನ್ನಾ ಹಣ ಅವರಿಗೂ ಜಮೆಯಾಗಿತ್ತು.ರಾಜ್ಯಮಟ್ಟದ ಬ್ಯಾಂಕರ್ಸ್ ಕಮಿಟಿ ಸೂಚನೆಯಂತೆ, ಸಾಲಮನ್ನಾಕ್ಕೆ ಅರ್ಹರಲ್ಲದ ಜಿಲ್ಲೆಯ 809 ರೈತರ ಖಾತೆಯಿಂದಹಣ ವಾಪಸ್ ಪಡೆಯಲಾಗಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ 13,988 ರೈತರ ಸಾಲ ಮನ್ನಾ ವಿಷಯದಲ್ಲಿ ಈ ರೀತಿಯ ಗೊಂದಲ ಆಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ಪಷ್ಟ ಪಡಿಸಿದ್ದಾರೆ. ಹೀಗಾಗಿ ಜಿಲ್ಲೆಯ ರೈತರು ಆತಂಕ ಪಡುವಅವಶ್ಯಕತೆ ಇಲ್ಲ. ಒಂದು ವೇಳೆ ಅರ್ಹ ರೈತರಿಗೆ ಅನ್ಯಾಯವಾಗಿದ್ದರೆ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಲಿಖಿತ ಮಾಹಿತಿ ನೀಡಬೇಕು. ಆ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು’ ಎಂದು ಅವರು ತಿಳಿಸಿದರು.

ರೈತರ ಅಳಲು: ‘ಶಹಾಪುರ ತಾಲ್ಲೂಕಿನ ಸಗರ ಎಸ್‌ಬಿಐ ಶಾಖೆಯಲ್ಲಿ₹61 ಸಾವಿರ ಬೆಳೆ ಸಾಲ ತೆಗೆದುಕೊಂಡಿದ್ದೆ. ನನಗೆ ಮೊದಲು₹50 ಸಾವಿರ, ನಂತರ₹14 ಸಾವಿರ ಹಣ ಜಮೆ ಆಗಿತ್ತು. ಒಂದು ವಾರದ ನಂತರ ಬ್ಯಾಂಕ್‌ಗೆ ತೆರಳಿದರೆ ಖಾತೆಯಲ್ಲಿಯ ಹಣ ವಾಪಸ್‌ ಪಡೆದಿದ್ದೇವೆ ಎಂದುಬ್ಯಾಂಕ್‌ನವರು ಹೇಳಿದರು’ ಎಂದು ರೈತ ಮಹಾದೇವಪ್ಪ ಬಳಗಾರ ದೂರಿದರು.

‘ಎಸ್‌ಬಿಐ ಶಾಖೆಯಲ್ಲಿ ₹50 ಸಾವಿರ ಹಾಗೂ ₹44 ಸಾವಿರ ಜಮೆ ಆಗಿತ್ತು. ಏಪ್ರಿಲ್ 5ರಂದು ಈ ಹಣ ವಾಪಸ್‌ ಪಡೆಯಲಾಗಿದೆಎಂದು ಬ್ಯಾಂಕ್‌ನಿಂದ ಮಾಹಿತಿ ಬಂತು. ನಮಗೆ ಬ್ಯಾಂಕ್‌ನವರು ಮೋಸ ಮಾಡಿದ್ದಾರೆ’ ಎಂದು ಚನ್ನಪ್ಪ ಆನೆಗುಂದಿ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂದು ರೈತರು ಆಸೆ ಇಟ್ಟುಕೊಂಡಿದ್ದರು. ಸಾಲ ಮನ್ನಾದ ಹಣ ಜಮೆ ಮಾಡಿ, ಮತ್ತೆ ಅದನ್ನು ವಾಪಸು ಪಡೆದುಕೊಂಡಿರುವುದುಸರ್ಕಾರದ ಕೆಟ್ಟ ನಡೆಯಾಗಿದೆ. ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಪ್ರಯತ್ನ ಇದಾಗಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ವಿಭಾಗೀಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.