ADVERTISEMENT

ಸುರಪುರ: ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:16 IST
Last Updated 3 ಜೂನ್ 2025, 14:16 IST
ಸುರಪುರದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಜಿಲ್ಲಾ ಪ್ರಧಾನ ಮತ್ತು ಸೇಷನ್ಸ್ ನ್ಯಾಯಾಧೀಶ ಮರುಳ ಆರಾಧ್ಯ ಉದ್ಘಾಟಿಸಿದರು. ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿ, ಬಸವರಾಜ ಉದ್ಘಾಟಿಸಿದರು 
ಸುರಪುರದಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಜಿಲ್ಲಾ ಪ್ರಧಾನ ಮತ್ತು ಸೇಷನ್ಸ್ ನ್ಯಾಯಾಧೀಶ ಮರುಳ ಆರಾಧ್ಯ ಉದ್ಘಾಟಿಸಿದರು. ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿ, ಬಸವರಾಜ ಉದ್ಘಾಟಿಸಿದರು    

ಸುರಪುರ: ‘ಸುರಪುರಕ್ಕೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಜೂರಾಗಿದ್ದು, ಇದರಿಂದ ಕ್ಷಕಿದಾರರಿಗೆ ಮತ್ತು ವಕೀಲರಿಗೆ ತುಂಬಾ ಅನುಕೂಲವಾಗಲಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮರುಳ ಆರಾಧ್ಯ ಹೇಳಿದರು.

ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಚ್ಚುವರಿ ನ್ಯಾಯಾಲಯಕ್ಕೆ ಎಲ್ಲ ರೀತಿಯ ಸಹಕಾರ ಕೊಡುತ್ತೇವೆ. ಕಲಾಪಗಳನ್ನು ಸರಿಯಾಗಿ ಮತ್ತು ಸಮರ್ಪಕವಾಗಿ ನಡೆಸಿಕೊಂಡು ಹೋಗಬೇಕು’ ಕರೆ ನೀಡಿದರು.

ADVERTISEMENT

ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮನಗಿ, ಜೆಎಂಎಫ್‍ಸಿ ನ್ಯಾಯಾಧೀಶರಾದ ಫಕೀರವ್ವ ಕೆಳಗೇರಿ, ಬಸವರಾಜ ಸೇರಿ ವಕೀಲರು ಇದ್ದರು.

ನಂತರ ವಕೀಲರ ಸಂಘದ ಸಭಾಂಗಣದಲ್ಲಿ ಪ್ರಧಾನ ನ್ಯಾಯಾಧೀಶರನ್ನು ಮತ್ತು ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರನ್ನು ಸ್ವಾಗತಿಸಿ ಸನ್ಮಾನಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿರಿಯ ವಕೀಲ ನಿಂಗಣ್ಣ ಚಿಂಚೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಾಯಬಣ್ಣ ಮೇಲಗಲ್, ಶಹಾಪುರ ವಕೀಲರ ಸಂಘದ ಅಧ್ಯಕ್ಷ ಸಂತೋಷ ಕುಮಾರ ದೇಶಮುಖ, ಸುರಪುರದ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ, ಅರವಿಂದಕುಮಾರ, ಜಿ. ತಮ್ಮಣ್ಣ, ಉದಯಕುಮಾರ, ಅಪ್ಪಾಸಾಹೇಬ ಪಾಟೀಲ, ಎಂ.ಎಸ್. ಹಿರೇಮಠ, ವಿ.ಎಸ್. ಜೋಷಿ, ಯಂಕಾರೆಡ್ಡಿ ಹವಲ್ದಾರ್, ಎನ್.ಜೆ. ಬಾಕಲಿ, ಆರ್.ಜೆ. ಬನ್ನಾಳ, ವಿ.ಸಿ. ಪಾಟೀಲ, ರಾಮನಗೌಡ ಸುಬೇದಾರ್, ಮೊಹ್ಮದ್ ಹುಸೇನ್, ವಿ.ಎಸ್. ಬೈಚಬಾಳ, ಬಸವರಾಜ್ ಕಿಲ್ಲೇದಾರ, ಜ್ಯೋತಿ ಎಲ್.ನಾಯಕ, ಮಲ್ಲಿಕಾರ್ಜುನ ಮಂಗಿಹಾಳ. ಮಲ್ಲಣ್ಣ ಭೋವಿ. ಮನೋಹರ ಕುಂಟೋಜಿ, ಚವ್ಹಾಲಕ್ಷ್ಮೀ ಪದ್ಮಾವತಿ, ಶ್ರೀದೇವಿ ಪಾಟೀಲ, ಛಾಯಾ ಕುಂಟೋಜಿ, ಶಿವಾನಂದ ಅವಂಟಿ, ಅಪ್ಪಣ್ಣ ಗಾಯಕವಾಡ, ಸಂಗಣ್ಣ ಬಾಕಲಿ, ಯಲ್ಲಪ್ಪ ಹುಲಕಲ್, ಅಶೋಕ ಕವಲಿ, ಸಂತೋಷ ಗಾರಂಪಳ್ಳಿ, ನಾಗರಾಜ ಚಾವಲ್ಕರ್, ಸುರೇಂದ್ರ ದೊಡ್ಡಮನಿ, ಗೋಪಾಲ ತಳವಾರ, ಬಲಭೀಮ ನಾಯಕ ದೇವಾಪುರ, ವಿನಾಯಕ ಕರಡಕಲ್ ಸೇರಿ ವಕೀಲರ ಸಂಘದ ಎಲ್ಲಾ ಸದಸ್ಯರು ಮತ್ತು ಶಹಾಪುರ ತಾಲ್ಲೂಕಿನ ವಕೀಲರು ಭಾಗವಹಿಸಿದ್ದರು.

ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಂದಕುಮಾರ ಕನ್ನೆಳ್ಳಿ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.