ADVERTISEMENT

‘ಮಿನಿ ವಿಧಾನ ಸೌಧ ಮಂಜೂರು ಮಾಡಿ’

ಘೋಷಣೆಗೆ ಸೀಮಿತವಾಗ ಗುರುಮಠಕಲ್‌ ತಾಲ್ಲೂಕು; ಅಭಿವೃದ್ಧಿ ಶೂನ್ಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 16:01 IST
Last Updated 23 ಆಗಸ್ಟ್ 2020, 16:01 IST
ಗುರುಮಠಕಲ್‌ ತಾಲ್ಲೂಕಿಗೆ ಮಿನಿ ವಿಧಾನಸೌಧ ಮಂಜೂರು ಮಾಡಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು
ಗುರುಮಠಕಲ್‌ ತಾಲ್ಲೂಕಿಗೆ ಮಿನಿ ವಿಧಾನಸೌಧ ಮಂಜೂರು ಮಾಡಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು   

ಗುರುಮಠಕಲ್‌: ತಾಲ್ಲೂಕುಘೋಷಣೆಯಾಗಿ ಹಲವು ವರ್ಷಗಳು ಕಳೆದರೂ ತಾಲ್ಲೂಕಿನಲ್ಲಿ ಅಗತ್ಯವಿರುವ ಕಾರ್ಯಾಲಯಗಳು ಇಲ್ಲ. ಇರುವಂಥ ಕೆಲವು ಕಚೇರಿಗಳುಮಳೆಯಿಂದ ಸೋರುತ್ತಿದ್ದರೂ ಸಂಬಂಧಿಸಿದವರು ಗಮನ ಹರಿಸಿಲ್ಲ. ಹೀಗಾಗಿ ತಾಲ್ಲೂಕಿಗೆಮಿನಿ ವಿಧಾನಸೌಧ ಮಂಜೂರು ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆಯು ಆಗ್ರಹಪಡಿಸಿದೆ.

ಈ ಕುರಿತು ಸಂಘಟನೆಯ ಪದಾಧಿಕಾರಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ತಾಲ್ಲೂಕಿಗೆ ಮಿನಿ ವಿಧಾನಸೌಧಕಟ್ಟಡ ಮಂಜೂರು ಮಾಡಿಸಲು ಸರ್ಕಾರಕ್ಕೆ ಒತ್ತಡ ಹಾಕಬೇಕು. ಒಂದು ವೇಳೆ ಜನಪ್ರತಿನಿಧಿಗಳು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ತಾಲ್ಲೂಕು ಅಧ್ಯಕ್ಷ ನಾಗೇಶ್ ಗದ್ದಿಗಿ, ಗೌರವಾಧ್ಯಕ್ಷ ನವಜರೆಡ್ಡಿ, ಕಾರ್ಯಾಧ್ಯಕ್ಷ ಲಾಲಪ್ಪ ತಲಾರಿ, ಯುವಘಟಕದ ಅಧ್ಯಕ್ಷ ಗೋಪಾಲಕೃಷ್ಣ ಮೇಧಾ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚೆಪೆಟ್ಲಾ, ನರಸಿಂಹಲು ಗಂಗಾನೋಳ, ಸುನೀಲ್ ಮಜ್ಜಿಗೆ, ಮಹೇಶಗೌಡ, ಪ್ರವೀಣ್ ತಲಾರಿ, ಶರಣು ಕೊಂಕಲ್, ಜಗಪ್ಪ ನಕ್ಕ, ಫೀರ್ ಅಹ್ಮದ್, ನರಸಿಂಹ ಮಡಿವಾಳ, ಸುನಿಲ್ ಮೇಧಾ, ದೀಪಕ್, ಅಂಜಿ, ಭೀಮು, ಹುಸೇನಪ್ಪ, ನರಸಪ್ಪ ಬೊಯಾ, ಸುಭಾಷ್ ರಾಠೋಡ, ರಘು ಮೆಕ್ಯಾನಿಕ್ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.