
ಪ್ರಜಾವಾಣಿ ವಾರ್ತೆ
ವಡಗೇರಾ: ಪಟ್ಟಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮಕ್ಕಳು ರೈತರು ಹಾಗೂ ಗ್ರಾಮಸ್ಥರು ಆದಿ ಬಸವಣ್ಣನ ಪರ್ವ ನಿಮಿತ್ಯ ಗ್ರಾಮ ದೇವರಿಗೆ ನೀರು ನೀಡಿ ಕಾಯಿ ಕರ್ಪೂರ ಅರ್ಪಿಸುವ ಪದ್ಧತಿ ಮೊದಲಿನಿಂದಲೂ ಬಂದಿದೆ ಎಂದು ಪರ್ವ ಸಮಿತಿಯ ಮುಖಂಡ ಶಿಲವಂತಪ್ಪ ಇಟಗಿ ಹೇಳಿದರು.
ಗ್ರಾಮ ದೇವರುಗಳಿಗೆ ಕಾಯಿ ಕರ್ಪೂರ ಅರ್ಪಿಸಿದ ನಂತರ ಪಟ್ಟಣದಲ್ಲಿ ಮನೆಮನೆಗೆ ತೆರಳಿ ರೈತರು ಬೆಳೆದ ಜೋಳ ಕಾಳು ಕಡಿ ಪದಾರ್ಥಗಳನ್ನು ಸಂಗ್ರಹಿಸಿ ಜೋಳದ ಅಂಬಲಿ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿದ ನಂತರ ರೈತರಿಗೆ ಮತ್ತು ಭಕ್ತರೆಲ್ಲರಿಗೂ ಅಂಬಲಿಯನ್ನು ಪ್ರಸಾದ ರೂಪದಲ್ಲಿ ವಿತರಿಸಲಾಗುವುದು. ರಾತ್ರಿ ಇಡೀ ಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗುವವು ಎಂಬ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.