
ನೀಲಹಳ್ಳಿ(ಸೈದಾಪೂರ): ‘ಅಂಬಿಗರ ಚೌಡಯ್ಯನವರ ವಚನ ಮತ್ತು ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು’ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ.ಮುದ್ನಾಳ ಅಭಿಪ್ರಾಯಪಟ್ಟರು.
ಸಮೀಪದ ನೀಲಹಳ್ಳಿ ಗ್ರಾಮದಲ್ಲಿ ಭಾನುವಾರ ಅಂಬಿಗರ ಚೌಡಯ್ಯ ಜಯಂತಿ ಪ್ರಯುಕ್ತ ಭಿತ್ತಿಪತ್ರ ಬಿಡುಗಡೆಗೊಳಿಸುವ ಮೂಲಕ ಕೋಲಿ ಸಮಾಜದ ಜನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವನ್ನು ಪ್ರತಿವರ್ಷ ಜ.21ರಂದು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜ.4 ರಿಂದ 19ರವರೆಗೆ ಪ್ರತಿ ಹೋಬಳಿ ಮಟ್ಟದಲ್ಲಿ ಕೋಲಿ ಸಮಾಜದ ಜನಜಾಗೃತಿ ಜಾಥಾ ತೆರಳಲಿದೆ. ಈ ಅಭಿಯಾನದಲ್ಲಿ ಸಮುದಾಯದ ಪ್ರತಿಯೊಬ್ಬರು ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಇಂದ್ರಮ್ಮ, ಲಕ್ಷ್ಮಿ, ಯಂಕಮ್ಮ, ಸುಶೀಲಮ್ಮ, ಮಹಾದೇವಮ್ಮ, ಪವನ, ಮಲ್ಲೇಶಿ, ರಾಜಪ್ಪ, ಮಲಮ್ಮ, ಸಾಯಮ್ಮ, ಸಿದ್ರಾಮ, ಹಣಮಂತ, ಶೇಕಪ್ಪ, ಬಾಲಪ್ಪ, ನರಸಪ್ಪ ಬನ್ನಪ್ಪಾ, ಹುಸೇನಪ್ಪ, ಶಂಕರ್, ಚಂದ್ರು, ಸಾಬಪ್ಪಾ, ಯಂಕಪ್ಪ, ಬಸಲಿಂಗಪ್ಪ, ಸೈದಪ್ಪ ಸೇರಿದಂತೆ ಅನೇಕ ಯುವಕರು ಕೋಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.