ADVERTISEMENT

ಸೈದಾಪುರ: ವಿವಿಧೆಡೆ ಅಂಬಿಗರ ಚೌಡಯ್ಯ ಜಯಂತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2022, 12:05 IST
Last Updated 21 ಜನವರಿ 2022, 12:05 IST
ಸೈದಾಪುರ ಪಟ್ಟಣದ ಗುರುಕುಲ ವಿದ್ಯಾ ಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು
ಸೈದಾಪುರ ಪಟ್ಟಣದ ಗುರುಕುಲ ವಿದ್ಯಾ ಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು   

ಸೈದಾಪುರ: ಪಟ್ಟಣದ ಗುರುಕುಲ ವಿದ್ಯಾ ಪೀಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಶಿಕ್ಷಕಿಯರಾದ ಮರಿಲಿಂಗಮ್ಮ, ಮಹೇಶ್ವರಿ, ನೇತ್ರಾವತಿ, ಆಸೀಫಾ, ಶೃತಿ ಹಾಗೂ ವಿದ್ಯಾರ್ಥಿಗಳು ಇದ್ದರು.

ADVERTISEMENT

ನೇತಾಜಿ ಶಾಲೆ: ಪಟ್ಟಣದ ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ಮುಖ್ಯಶಿಕ್ಷಕ ಅರುಣ ಕುಮಾರ ಜೇಗರ್ ಮಾತನಾಡಿ,‘ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು’ ಎಂದರು.

ಶಿಕ್ಷಕರಾದ ದೇವಿಂದ್ರಪ್ಪ, ಸೋನಾಲಿ, ಪೂಜಾ, ನಜೀಯಾ, ಪ್ರಿಯಾಂಕ, ಸಂಗೀತಾ ಹಾಗೂ ವಿದ್ಯಾರ್ಥಿಗಳು ಸೇರಿ ಇತರರು ಇದ್ದರು.

ಹೆಗ್ಗಣಗೇರಾ: ಸಮೀಪದ ಹೆಗ್ಗಣಗೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು.

ಮುಖ್ಯಶಿಕ್ಷಕ ಲಿಂಗಾರೆಡ್ಡಿ ಗಬ್ಬೂರ, ಎಸ್‍ಡಿಎಂಸಿ ಅಧ್ಯಕ್ಷ ಸಾಹೇಬಗೌಡ ಕಲಾಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಬಸಲಿಂಗಮ್ಮ ಕಲಾಲ್, ಮಂಜುಳಾ ದಳವಾಯಿ, ತಾಯಮ್ಮ ಹಜೇರಿ, ಲಕ್ಷ್ಮೀ ಬಡಿಗೇರಾ, ಬಸವರಾಜಪ್ಪಗೌಡ, ಸುಭಾಶ್ಚಂದ್ರ ಬಾಗ್ಲಿ, ಮಲ್ಲಪ್ಪ ಬಾಗ್ಲಿ, ಗೋಕುಲಪ್ಪ ಗೋಪಾಳಿ, ಯಂಕಪ್ಪ ಗೋಪಾಳಿ, ರಮೇಶ ಸೇರಿದಂತೆ ಇತರರು ಇದ್ದರು.

ಮಾಧ್ವಾರ: ಸಮೀಪದ ಮಾಧ್ವಾರ ಗ್ರಾಮದ ಸರ್.ಎಂ.ವಿಶ್ವೇಶ್ವರಯ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಮಲ್ಲು ಮೇಸ್ತ್ರಿ ಮಾತನಾಡಿದರು.

ಮುಖ್ಯಶಿಕ್ಷಕ ಶ್ರೀನಿವಾಸ, ಶಶಿಕಲಾ, ಚನ್ನಪ್ಪ, ಶಾಂತರಾಜು, ಚಂದ್ರಕಲಾ, ಸ್ವಾತಿ, ಶ್ರಾವಣಿ, ಅಂಬಿಕಾ ಹಾಗೂ ವರ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.