ಯಾದಗಿರಿ: ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಗೆ ವಿಧಿಸಬೇಕು ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಮುಖಂಡರು ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರನ್ನು ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಕೆ ಮಾಡಿದರು.
ಈ ವೇಳೆ ಮಾತನಾಡಿದ ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ‘ಇಂತಹ ಸಮಾಜಘಾತುಕ ಕೃತ್ಯ, ಅನ್ಯಾಯವನ್ನು ನಮ್ಮ ಸಮಾಜ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಪದೇ ಪದೇ ಘಟನೆಗಳು ನಡೆಯುತ್ತಿವೆ. ಸಮಾಜಘಾತುಕ ಶಕ್ತಿಗಳ ಇಂತಹ ಕೃತ್ಯವನ್ನು ನೋಡಿ ನಮ್ಮ ಸಮಾಜ ಕೈಕಟ್ಟಿ ಕೂರುವುದಿಲ್ಲ’ ಎಂದರು.
‘ಮೂರ್ತಿಯನ್ನು ವಿರೂಪ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಮಾಡಿ ಆದಷ್ಟು ಬೇಗ ಬಂಧಿಸಬೇಕು. ಇಲ್ಲದೆ ಇದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು’ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೊಸಿ ಮಾತನಾಡಿ, ‘ನಿಜಶರಣ ಅಂಬಿಗರ ಚೌಡಯ್ಯ ಅವರು ನಾಡು ಕಂಡ ಮಹಾಪುರುಷ. ಯಾವುದೇ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಮಹಾನಪುರುಷನ ಮೂರ್ತಿಯನ್ನು ಭಗ್ನಗೊಳಿಸುವ ಮೂಲಕ ನಮ್ಮ ಸಮಾಜಕ್ಕೆ ಅಪಮಾನ ಮಾಡಲಾಗಿದೆ’ ಎಂದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾಧ ಭೀಮರೆಡ್ಡಿ ಯರಗೋಳ, ನಿಂಗಪ್ಪ ಜಾಲಗಾರ, ರಾಜಪ್ಪ ಸೈದಾಪುರ, ಮಲ್ಲು ಪೂಜಾರಿ, ರಮೇಶ ಕೋಟಿಮನಿ, ಶರಣಪ್ಪ ಮೋಟ್ನಳ್ಳಿ, ಅಯ್ಯಪ್ಪ ನಾಯ್ಕೋಡಿ, ವೆಂಕಟೇಶ್ ಸುರಪುರ, ಅಯ್ಯಪ್ಪ ಅಂಬಿಗರ, ಮಹಾದೇವಪ್ಪ ಗಣಪುರ, ಶಾಂತಪ್ಪ ಚಾಮನಳ್ಳಿ, ರಾಜು ಹಾಳಗೇರಾ, ದೇವಿಂದ್ರಪ್ಪ ಪಸಪುಲ್, ಶಿವುಕುಮಾರ್ ಬಳಿಚಕ್ರ, ವಿಶ್ವನಾಥ್ ಬಾಡಿಯಾಳ, ಸಾಬಣ್ಣ ಮರಿಯಪ್ಪ ಸುಣಗಾರ, ಅಯ್ಯಪ್ಪ ನಾಯ್ಕೋಡಿ, ಶರಣು ಪಟೇದಾರ್, ಭೀಮು ಹಿರೇನೂರ, ಮಲ್ಲಿಕಾರ್ಜುನ ಎಮ್ಮೆನೋರ್ ಸೇರಿ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.