ADVERTISEMENT

ಯಾದಗಿರಿ | ಆತ್ಮಲಿಂಗ ಮಂದಿರ: ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 5:24 IST
Last Updated 5 ಫೆಬ್ರುವರಿ 2026, 5:24 IST
ಯಾದಗಿರಿ ನಗರದಲ್ಲಿ ಈಚೆಗೆ ಆತ್ಮಲಿಂಗ ದೇವಸ್ಥಾನದ ರಥೋತ್ಸವ ಅದ್ದೂರಿಯಾಗಿ ಜರುಗಿತು
ಯಾದಗಿರಿ ನಗರದಲ್ಲಿ ಈಚೆಗೆ ಆತ್ಮಲಿಂಗ ದೇವಸ್ಥಾನದ ರಥೋತ್ಸವ ಅದ್ದೂರಿಯಾಗಿ ಜರುಗಿತು   

ಯಾದಗಿರಿ: ನಗರದ ಗಂಜ್ ಪ‍್ರದೇಶದ ಆತ್ಮಲಿಂಗ ದೇವಸ್ಥಾನದ 20ನೇ ಜಾತ್ರೆಯ ಅಂಗವಾಗಿ ರಥೋತ್ಸವ ಅದ್ದೂರಿಯಾಗಿ ಈಚೆಗೆ ಜರುಗಿತು.

ಜೈ ಭಾರತ ಮಾತಾ ಸೇವಾ ಸಮಿತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಜಾತ್ರೆಯ ಧಾರ್ಮಿಕ ಕಾರ್ಯಗಳು ಜರುಗಿದವು. ಹವಾ ಮಲ್ಲಿನಾಥ ಮಹಾರಾಜರ ತುಲಾಭಾರ, ಅಗ್ನಿ ಪ್ರವೇಶ, ಭಜನೆ, ಅನ್ನ ಪ್ರಸಾದದಂತಹ ಕಾರ್ಯಕ್ರಮಗಳು ನಡೆದವು.

ದೇವಸ್ಥಾನದ ಮುಖ್ಯಸ್ಥರಾದ ನಾಗಮ್ಮ ಮದ್ರಿಕಿ, ಮಲ್ಲಿಕಾರ್ಜುನ ಮುತ್ಯ, ಬಿಜೆಪಿಯ ಮುಖಂಡ ಮಹೇಶರೆಡ್ಡಿ ಮುದ್ನಾಳ, ಸಮಿತಿ ಜಿಲ್ಲಾ ಅಧ್ಯಕ್ಷ ಶಂಕರಲಿಂಗಪ್ಪ ಕಾಜಗರ್, ತಾಲ್ಲೂಕು ಅಧ್ಯಕ್ಷ ಬಸವಂತ ರೆಡ್ಡಿ ಮಲ್ಲಾರ್, ಪ್ರಮುಖರಾದ ಸಾಜೀರಾವ ಪಾಟೀಲ, ಲಕ್ಷ್ಮಿಪುತ್ರ ಮಾಲಿ ಪಾಟೀಲ, ವಕೀಲ ವೈಜನಾಥ ಎಸ್.ಝಳಕಿ, ವಿನಯ್ ರೆಡ್ಡಿ, ಶ್ರೀಧರ್ ಸಾಹುಕಾರ ಸೇರಿ ಇತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.