ಯಾದಗಿರಿ: ಭೀಮಾ ನದಿಯ ಪ್ರವಾಹದಿಂದಾಗಿ ಭಾನುವಾರ ಕಲಬುರಗಿ- ಯಾದಗಿರಿ ನಡುವಿನ ದೊಡ್ಡ ಹಳ್ಳದ ಸೇತುವೆ ಮುಳುಗಡೆಯಾಗಿದೆ.
ಮಹಾರಾಷ್ಟ್ರದಲ್ಲಿನ ಮಳೆಯಿಂದ ಅಲ್ಲಿನ ಭೀಮಾ ಕಣಿವೆಯ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿದುಬರುತ್ತಿದೆ. ಇದರಿಂದ ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ನದಿಯ ಪ್ರವಾಹದ ನೀರು ಹಳ್ಳಗಳ ಮೂಲಕ ಎಲ್ಲೆಂದರಲ್ಲಿ ನುಗ್ಗುತ್ತಿದೆ. ನಗರ ಪ್ರದೇಶಕ್ಕೂ ನೀರು ವ್ಯಾಪಿಸಿಕೊಂಡಿದ್ದು, ವಿಶ್ವಾರಾಧ್ಯ ನಗರ, ವೀರಭದ್ರೇಶ್ವರ ನಗರ, ಗ್ರೀನ್ ಸಿಟಿ ಸೇರಿದಂತೆ ಹಲವೆಡೆಯ ಜನ ವಸತಿಗಳಿಗೆ ಮೊಣಕಾಲುದ್ದ ನೀರು ಆವರಿಸಿಕೊಂಡಿದೆ.
ಕಲಬುರಗಿ- ಯಾದಗಿರಿ- ರಾಯಚೂರು ರಸ್ತೆಯ ನಗರ ಸಮೀಪದ ದೊಡ್ಡ ಹಳ್ಳದ ಮೇಲೂ ನೀರು ಹರಿದಾಡುತ್ತಿದೆ. ದಶಕಗಳ ಹಳೆಯದಾದ ಸೇತುವೆಯ ಉತ್ತರ ದಿಕ್ಕಿನಲ್ಲಿ ಬಿರುಕು ಕಾಣಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.