ವಡಗೇರಾ: ಕಳೆದ ವಾರ ಸತತ ಸುರಿದ ಮಳೆ ಹಾಗೂ ಭೀಮಾ ನದಿ ಪ್ರವಾಹದಿಂದ ಸಾವಿರಾರು ಹೇಕ್ಟರ್ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು, ರೈತರ ಮುಖದಲ್ಲಿ ಕರಾಳ ಛಾಯೆ ಆವರಿಸಿದೆ.
ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಅಂದಾಜು 55,730 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು ಇದರಲ್ಲಿ ಹತ್ತಿ 19,182 ಹೇಕ್ಟರ್, ಭತ್ತ 2,217 ಹೇಕ್ಟರ್, ತೊಗರಿ 6,10 ಹೇಕ್ಟರ್ ಪ್ರದೇಶದ ಬೆಳೆಗಳು ನಷ್ಟವಾಗಿದೆ.
ತೋಟಗಾರಿಗೆ ಬೆಳೆಯಾದ ಟಮಾಟೊ 0.88, ಈರುಳ್ಳಿ 1.75, ಮೇಣಸಿನಕಾಯಿ 2.55, ಬದನೆಕಾಯಿ 0.40, ಪಪಾಯಿ 2.60, ಮಾರಿಗೋಲ್ಡ್ 0.40, ಕ್ಯುಕರ್ಬಿಟ್ಸ್ 1.40, ಬಾಳೆಹಣ್ಣು 0.40 ಹೀಗೆ 11.18 ಹೇಕ್ಟರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗಳು ಹಾಳಾಗಿದೆ.
ಆರ್ಥಿಕ ಪರಿಸ್ಥಿತಿ ಸುಧಾರಿಸುವ ಹತ್ತಿ ಹಾಗೂ ಭತ್ತ ಈ ವರ್ಷ ಭಾರಿ ಪ್ರಮಾಣದಲ್ಲಿ ಹಾಳಾಗಿದ್ದು, ಬಿತ್ತನೆಗೆ ಮಾಡಿದ ಸಾಲ ಹೇಗೆ ತೀರಿಸುವುದು ಎಂದು ರೈತರು ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ.
ವಡಗೇರಾ ತಾಲ್ಲೂಕು ವ್ಯಾಪ್ತಿಯ ರೈತರಿಗೆ ಪ್ರತಿ ವರ್ಷ ಅತಿವೃಷ್ಟಿಯಿಂದ ಬೆಳೆಗಳು ಹಾಳಾಗುತ್ತಿರುವುದರಿಂದ ಅನೇಕ ರೈತ ಕುಟುಂಬಗಳು ಕೃಷಿ ಸಾಲ ತೀರಿಸಲು ನಗರಗಳತ್ತ ದುಡಿಯಲು ಹೋಗುವದು ಅನಿವಾರ್ಯವಾಗಿದೆ.
ಕೆಲ ಸಣ್ಣ ರೈತರು ಬ್ಯಾಂಕ್ ಸಾಲ ಹಾಗೂ ಖಾಸಗಿ ಸಾಲಕ್ಕೆ ಹೇದರಿ ಆತ್ಮಹತ್ಯೆಗಳನ್ನು ಮಾಡಿಕೊಂಡ ಉದಾಹರಣೆಗಳನ್ನು ಕಾಣಬಹುದಾಗಿದೆ.
ಈ ವರ್ಷದ ಬೆಳೆಹಾನಿಯಿಂದ ರೈತರ ಜಂಗಾಬಲವೆ ಕುಗ್ಗಿ ಹೋಗಿದೆ. ಅದಕ್ಕಾಗಿ ಕೃಷಿ ಹಾಗೂ ಕಂದಾಯ ಇಲಾಖೆ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಸಕಾಲಕ್ಕೆ ಸರ್ಕಾರ ಬೆಳೆ ಪರಿಹಾರ ಮಂಜೂರು ಮಾಡಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.
ಕೃಷಿ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಈವರೆಗೆ ಶೇ70 ರಿಂದ 80ರಷ್ಟು ಬೆಳೆ ಹಾನಿ ಸಮೀಕ್ಷೆ ಮಾಡಿದೆ. ಇನ್ನೂ ಒಂದುವಾರದಲ್ಲಿ ಬೆಳೆ ಹಾನಿಯ ಸಮೀಕ್ಷೆ ಪೂರ್ಣಗೊಳ್ಳುತ್ತದೆಗಣಪತಿ ಕೃಷಿ ಅಧಿಕಾರಿ ವಡಗೇರಾ
ಭೀಮಾ ನದಿಗೆ ಪ್ರವಾಹದಿಂದ ಭತ್ತ ಸಂಪೂರ್ಣ ಹಾಳಾಗಿದೆ. ಒಂದು ಎಕರೆ ಭತ್ತಕ್ಕೆ ರೈತರು ₹ 40 ರಿಂದ ₹50 ಸಾವಿರ ಖರ್ಚು ಮಾಡಿದ್ದಾರೆ. ಸಾಲ ತೀರಿಸುವದು ಹೇಗೆ ಎಂದು ಚಿಂತೆ ಕಾಡುತ್ತಿದೆರಾಜುಗೌಡ ಕಂದಳ್ಳಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.