ADVERTISEMENT

ಹುಣಸಗಿ:ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ ಬಾಲಕನ ಮೃತ ದೇಹ ಹೊರ ತೆಗೆದು ಶವಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:39 IST
Last Updated 21 ಆಗಸ್ಟ್ 2025, 6:39 IST
ಹುಣಸಗಿ ತಾಲ್ಲೂಕಿನ ಜೋಗುಂಡಬಾವಿ ಗ್ರಾಮದಲ್ಲಿ ಅಂತ್ಯಸಂಸ್ಕಾರವಾಗಿದ್ದ ಬಾಲಕನ ಶವ ಹೊರ ತೆಗೆದು ಬುಧವಾರ ಪರೀಕ್ಷೆ ನಡೆಸಲಾಯಿತು 
ಹುಣಸಗಿ ತಾಲ್ಲೂಕಿನ ಜೋಗುಂಡಬಾವಿ ಗ್ರಾಮದಲ್ಲಿ ಅಂತ್ಯಸಂಸ್ಕಾರವಾಗಿದ್ದ ಬಾಲಕನ ಶವ ಹೊರ ತೆಗೆದು ಬುಧವಾರ ಪರೀಕ್ಷೆ ನಡೆಸಲಾಯಿತು    

ಹುಣಸಗಿ: ಕಳೆದ ನಾಲ್ಕು ತಿಂಗಳ ಹಿಂದೆ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದ ಬಾಲಕನ ಮೃತದೇಹ ಹೊರ ತೆಗದು ಶವ ಪರೀಕ್ಷೆ ನಡೆಸಿದ ಘಟನೆ ತಾಲ್ಲೂಕಿನ ಜೋಗುಂಡಬಾವಿ ಗ್ರಾಮದಲ್ಲಿ ಬುಧವಾರ ನಡೆದಿದೆ.

ಜೋಗುಂಡಬಾವಿ ನಿವಾಸಿ ಯಮನಪ್ಪ ಇಂಗಳಗಿ ಮತ್ತು ದುರ್ಗವ್ವ ದಂಪತಿಯ 17 ವರ್ಷದ ಪುತ್ರ ಜಗದೇಶನ ಶವವನ್ನು ಹೊರ ತೆಗೆದು ಶವ ಪರೀಕ್ಷೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏಪ್ರಿಲ್ 23ರಂದು ಜಗದೇಶ, ಗ್ರಾಮದ ಹಣಮಂತ ಅವರ ಜಮೀನಿನ ಬಾವಿಗೆ ಈಜಾಡಲು ಹೋಗಿದ್ದ. ಬಾವಿಯಲ್ಲಿ ಈಜುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಆ ಬಳಿಕ ಪೋಷಕರು ಮೃತ ದೇಹವನ್ನು ಹೊಲದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ADVERTISEMENT

ಜುಲೈ 12ರಂದು ಮೃತ ಬಾಲಕನ ತಂದೆ ಯಮನಪ್ಪ ಅವರು ಮಗನ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ, ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಾಲಕನ ಪೋಷಕರ ಸಮ್ಮುಖದಲ್ಲಿ ತಹಶೀಲ್ದಾರ್ ಎಂ.ಬಸವರಾಜ ಅವರು ಶವವನ್ನು ಹೊರ ತೆಗೆಸಿ ಶವಪರೀಕ್ಷೆ ನಡೆಸಿದರು. ಈ ವೇಳೆ ಪಿಎಸ್‌ಐ ರಾಜಶೇಖರ, ವೈದ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.