ಸುರಪುರ: ‘ಡಾ.ಅಂಬೇಡ್ಕರ್ ಅವರ 66ನೇ ಧಮ್ಮ ಚಕ್ರ ಪ್ರವರ್ತನ ದಿನದ ಅಂಗವಾಗಿ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಮತ್ತು ಪರಿಶಿಷ್ಟ ಜಾತಿ ಸಂಘಟನೆಗಳ ವತಿಯಿಂದ ಇಲ್ಲಿನ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಅ.14 ರಂದು ಬೆಳಿಗ್ಗೆ 11 ಗಂಟೆಗೆ ಬೌದ್ಧ ಧಮ್ಮ ದೀಕ್ಷಾ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಬೌದ್ಧ ಸಾಹಿತಿ ದೇವೆಂದ್ರ ಹೆಗಡೆ ಹೇಳಿದರು.
ನಗರದಲ್ಲಿ ಮಂಗಳವಾರ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಅವರು, ಬಂತೇಜಿಗಳು ಈಗಾಗಲೇ ಪ್ರತಿ ಗ್ರಾಮಕ್ಕೆ ಧಮ್ಮ ಪ್ರಚಾರ ರಥಯಾತ್ರೆ ತೆಗೆದುಕೊಂಡು ಹೋಗಿ ಪ್ರಚಾರ ಮಾಡಿದ್ದಾರೆ. ಸುರಪುರ, ಹುಣಸಗಿ ತಾಲ್ಲೂಕುಗಳ ಎಲ್ಲ ಗ್ರಾಮಗಳಲ್ಲಿ ಕರಪತ್ರಗಳನ್ನು ಅಂಟಿಸಲಾಗಿದೆ. ದೀಕ್ಷಾ ತೆಗೆದುಕೊಳ್ಳವ ಆಸಕ್ತರಿಗೆ ಅರ್ಜಿ ನೀಡಲಾಗಿದೆ. 500ಕ್ಕೂ ಹೆಚ್ಚು ಜನರು ದೀಕ್ಷಾ ತೆಗೆದುಕೊಳ್ಳುವರು ಎಂದು ತಿಳಿಸಿದರು.
ಡಾ. ಅಂಬೇಡ್ಕರ್ ಅವರ ಮೊಮ್ಮಗಳು ರಮಾತಾಯಿ ಅಂಬೇಡ್ಕರ್ ಸಮಾರಂಭ ಉದ್ಘಾಟಿಸುವರು. ಶಾಸಕ ರಾಜೂಗೌಡ ಧ್ವಜಾರೋಹಣ ನೆರವೇರಿಸುವರು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಪುಷ್ಪಾಚರಣೆ ಮಾಡುವರು. ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ ಅಧ್ಯಕ್ಷತೆ ವಹಿಸುವರು. ವರಜೋತಿ ಬಂತೇಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖಂಡರಾದ ಡಿ.ಜಿ. ಸಾಗರ, ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ್, ಆರ್.ಮೋಹನರಾಜ್, ಪರಶುರಾಮ ನೀಲನಾಯಕ, ಉದಯಕುಮಾರ ತೆಲ್ಲೂರ್, ಸಿ.ಕೆ.ಮಹೇಶ್, ಅರ್ಜುನ ಭದ್ರೆ, ಅಣ್ಣಯ್ಯ, ಎಣ್ಣೂರ ಶ್ರೀನಿವಾಸ, ಮಲ್ಲಿಕಾರ್ಜುನ ಭಾಲ್ಕಿ, ಮಲ್ಲಪ್ಪ ಹೊಸ್ಮನಿಕರ್, ಹಣಮಂತ ಯಳಸಂಗಿ, ಧನರಾಜ್ ನಾಗವಂಶಿ, ವಿ. ನಾಗರಾಜ, ಮರೆಪ್ಪ ಹಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ ಡಾ.ಟಿ.ಮಂಜುನಾಥ, ಟಿಎಚ್‍ಒ ಡಾ.ಆರ್.ವಿ.ನಾಯಕ, ತಾಪಂ ಇಒ ಚಂದ್ರಶೇಖರ ಪವ್ಹಾರ್, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಪಿಐ ಸುನೀಲ್ ಮೂಲಿಮನಿ ಇನ್ನಿತರ ಇಲಾಖೆಗಳ ಅಧಿಕಾರಿಗಳು, ನಗರಸಭೆ ಸದಸ್ಯರಾದ ಶಿವಕುಮಾರ ಕಟ್ಟಿಮನಿ, ಶಹನಾಜ್ ಬೇಗಂ ವಿಶೇಷ ಆಹ್ವಾನಿತರಾಗಿರುತ್ತಾರೆ. ಅಮ್ಮಾರಾಮಚಂದ್ರಜಿ, ಸಿದ್ಧಾರ್ಥ.ಡಿ ರಾಜ್ಯ ಮಟ್ಟದ ಕಲಾ ತಂಡದವರು ಧಮ್ಮ ಗೀತೆಗಳನ್ನು ಹಾಡಲಿದ್ದಾರೆ ಎಂದರು.
ಬೈಕ್ ರ್‍ಯಾಲಿ ಮುಖಾಂತರ ರಮಾತಾಯಿ ಅವರನ್ನು ಹಸನಾಪುರದ ನಾಲ್ವಡಿ ರಾಜಾ ವೆಂಕಟಪ್ಪನಾಯಕ ವೃತ್ತದಿಂದ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದೆ. ನಂತರ ಝಂಡದಕೇರಾದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಧಮ್ಮ ದೀಕ್ಷಾವನ್ನು ಪೂಜ್ಯ ಭಿಕ್ಕು ಸಂಘ ನೆರವೇರಿಸಿ ಕೊಡಲಿದೆ. ಟ್ರಸ್ಟಿಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ದೀಕ್ಷಾ ಕೊಡಿಸಲಾಗುತ್ತದೆ. ಯಾರಿಗೂ ಬಲವಂತವಾಗಿ ಒತ್ತಾಯಿಸಿಲ್ಲ. ಅರ್ಜಿಯೊಂದಿಗೆ ಆಧಾರ್ ಕಾರ್ಡ್ ಲಗತಿಸಿದವರಿಗೆ ದೀಕ್ಷಾಗೆ ಅವಕಾಶ ಮಾಡಿಕೊಡಲಾಗುತ್ತಿದೆ. ನಂತರ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದರು.
‘ದೀಕ್ಷಾ ಪಡೆದವರು 22 ಪ್ರತಿಜ್ಞೆಗಳನ್ನು ಸ್ವಯಂ ಆಚರಣೆ ಮಾಡಬೇಕು. ಇಲ್ಲಿ ಯಾವುದೇ ಧರ್ಮಕ್ಕೆ ಅವಮಾನ, ವಿರೋಧ ಇರುವುದಿಲ್ಲ. ಸಂವಿಧಾನದ ಅಡಿಯಲ್ಲಿ ಇರುವಂತ ಅಧಿಕಾರ ಬಳಸಿಕೊಂಡು ಬೌದ್ಧ ಧರ್ಮಕ್ಕೆ ನಾವು ಹೋಗುತ್ತಿದ್ದೇವೆ. ಅದು ನಮ್ಮ ಮೂಲ ಮನೆ. ಮರಳಿ ನಮ್ಮ ಮನೆಗೆ ಹೋಗುತ್ತಿದ್ದೇವೆ’ ಎಂದರು.
ಮುಖಂಡರಾದ ಆದಪ್ಪ ಹೊಸ್ಮನಿ ಮಾತನಾಡಿದರು. ವೆಂಕಟೇಶ್ ಹೊಸ್ಮನಿ, ನಾಗಣ್ಣ ಕಲ್ಲದೇವನಹಳ್ಳಿ, ಭೀಮರಾಯ ಸಿಂದಗೇರಿ, ರಾಹುಲ ಹುಲಿಮನಿ, ಗೋಪಾಲ ವಜ್ಜಲ್, ಮಾಳಪ್ಪ ಕಿರದಳ್ಳಿ, ಹಣಮಂತ ಹೊಸ್ಮನಿ ಬೊಮ್ಮನಳ್ಳಿ, ವೀರಭದ್ರ ತಳವಾರಗೇರಾ, ವೆಂಕಟೇಶ್ ಸುರಪುರಕರ್, ಶಿವಶಂಕರ ಹೊಸ್ಮನಿ, ಬಸವರಾಜ ಬಡಿಗೇರ್, ಹುಲಗಪ್ಪ ದೇವತ್ಕಲ್, ಮಲ್ಲು ಕೆಸಿಪಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.