ADVERTISEMENT

ಗುರುಮಠಕಲ್‌ | ಚಾಲಕ, ನಿರ್ವಾಹಕರಿಗೆ ಸನ್ಮಾನಿಸಿದ ಗ್ರಾಮಸ್ಥರು

ಬಸ್‌ನಲ್ಲಿ ಮರೆತಿದ್ದ 20 ಗ್ರಾಂ ಚಿನ್ನ, ಮೊಬೈಲ್‌, ನಗದು ವಾರಸುದಾರರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 7:11 IST
Last Updated 8 ಆಗಸ್ಟ್ 2025, 7:11 IST
ಗುರುಮಠಕಲ್‌ ಪಟ್ಟಣದಲ್ಲಿ ಬುಧವಾರ ರಾತ್ರಿ ಕೆಕೆಆರ್‌ಟಿಸಿ ಬಸ್‌ ಚಾಲಕ ಶಿವಪ್ಪ ಮತ್ತು ನಿರ್ವಾಹಕ ಎಸ್‌.ಎಸ್‌.ಕೂಲಾರಿ ಅವರನ್ನು ಸನ್ಮಾನಿಸಲಾಯಿತು
ಗುರುಮಠಕಲ್‌ ಪಟ್ಟಣದಲ್ಲಿ ಬುಧವಾರ ರಾತ್ರಿ ಕೆಕೆಆರ್‌ಟಿಸಿ ಬಸ್‌ ಚಾಲಕ ಶಿವಪ್ಪ ಮತ್ತು ನಿರ್ವಾಹಕ ಎಸ್‌.ಎಸ್‌.ಕೂಲಾರಿ ಅವರನ್ನು ಸನ್ಮಾನಿಸಲಾಯಿತು   

ಗುರುಮಠಕಲ್‌: ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ ಚಿನ್ನ, ಮೊಬೈಲ್‌, ಆಧಾರ್‌ ಕಾರ್ಡ್‌ ಸೇರಿ ಇತರೆ ಕಾಗದಪತ್ರಗಳನ್ನು ವಾರಸುದಾರ ಮಹಿಳೆಗೆ ಸ್ವತ್ತುಗಳನ್ನು ಹಸ್ತಾಂತರಿಸಿದ ಕೆಕೆಆರ್‌ಟಿಸಿ ಬಸ್‌ ಚಾಲಕ ಮತ್ತು ನಿರ್ವಾಹಕರನ್ನು ಸಾರ್ವಜನಿಕರು ಸನ್ಮಾನಿಸಿದ್ದಾರೆ.

ಬಸ್‌ ಚಾಲಕ ಶಿವಪ್ಪ ಮತ್ತು ನಿರ್ವಾಹಕ ಎಸ್‌.ಎಸ್‌.ಕೂಲಾರಿ ಅವರು ಚಪೆಟ್ಲಾ ಗ್ರಾಮದ ಪಾಂಡುರಂಗಮ್ಮ ಎಲ್‌.ಗವಿನೋಳ ಅವರಿಗೆ 20 ಗ್ರಾಂ ಚಿನ್ನ, ಮೊಬೈಲ್‌, ನಗದು ಹಸ್ತಾಂತರ ಮಾಡಿದರು.

ಪಾಂಡುರಂಗಮ್ಮ ಅವರು ಆಗಸ್ಟ್‌ 6ರಂದು ಪಟ್ಟಣದಿಂದ ಕಲಬುರಗಿ ನಗರಕ್ಕೆ ತೆರಳುವ ಬಸ್‌ ಹತ್ತಿದ್ದರು. ತಮ್ಮ ಗ್ರಾಮ ಬರುತ್ತಿದ್ದಂತೆ ಬಸ್‌ನಿಂದ ಇಳಿದು, 20ಗ್ರಾಂ ಚಿನ್ನ ನಗದು ಹಣ, ಆಧಾರ್‌ ಕಾರ್ಡ್‌ ಸೇರಿ ಕೆಲವು ದಾಖಲೆಗಳನ್ನು ಬಸ್‌ನಲ್ಲೇ ಮರೆತು ಬಿಟ್ಟಿದ್ದರು.

ADVERTISEMENT

ಚಪೆಟ್ಲಾ ಗ್ರಾಮದ ರೈತ ಸಂಘಟನೆ ಮುಖಂಡ ಬಸವಂತರೆಡ್ಡಿ ಎನ್‌.ಪೆದ್ದನಾಗಮ್ಮೋಳ ಅವರಿಗೆ ತಿಳಿಸಿದ್ದಾರೆ. ಅವರು ಬಸ್‌ ಘಟಕ ವ್ಯವಸ್ಥಾಪಕ ಪ್ರವೀಣ ಅವರಿಗೆ ಕರೆ ಮಾಡಿ ನಡೆದ ವಿಷಯವನ್ನು ಮನವರಿಕೆ ಮಾಡಿದರು. ವ್ಯವಸ್ಥಾಪಕರು ನಿರ್ವಾಹಕ ಮತ್ತು ಚಾಲಕನಿಗೆ ಕರೆ ಮಾಡಿ, ಪ್ರಯಾಣಿಕರ ವಸ್ತುಗಳನ್ನು ನೋಡಿ, ವಶದಲ್ಲಿರಿಸಿಕೊಳ್ಳಲು ಸೂಚಿಸಿದ್ದಾರೆ.

ಚಾಲಕ ಮತ್ತು ನಿರ್ವಾಹಕರು ಸ್ವತ್ತುಗಳು ಸಿಕ್ಕ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಬಸ್‌ ಕಲಬುರಗಿ ನಗರಕ್ಕೆ ಹೋಗಿ ವಾಪಾಸ್ ಬಂದ ನಂತರ ಬಸ್‌ ಘಟಕದ ಅಧಿಕಾರಿಗಳು ಪ್ರಯಾಣಿಕರ ದಾಖಲೆಗಳನ್ನು ಪರಿಶೀಲಿಸಿ, ಎಲ್ಲಾ ವಸ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಿದ್ದಾರೆ.

ಚಾಲಕ ಶಿವಪ್ಪ ಮತ್ತು ನಿರ್ವಾಹಕರ ಕೂಲಾರಿ ಅವರಿಗೆ ಚಪೆಟ್ಲಾ ಗ್ರಾಮಸ್ಥರು ಸನ್ಮಾನಿಸಿ, ಗೌರವಿಸಿದರು. ಈ ವೇಳೆ ಬಸ್‌ ಘಟಕ ವ್ಯವಸ್ಥಾಪಕ ಪ್ರವೀಣ ಯರಗಲ್‌, ಅಧಿಕಾರಿ ಸಿ.ಎಂ.ಮೊಹತ್ತಗೆ, ಸಂಚಾರ ನಿಯಂತ್ರಕ ಶರಣಪ್ಪ, ಮೇಲ್ವಿಚಾರಕ ರಾಮರೆಡ್ಡಿ, ಅಮ್ಜದ್‌ ಖಾನ್‌, ಬಸವಂತರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.