ADVERTISEMENT

ಚೆಕ್ ಬೌನ್ಸ್ ಪ್ರಕರಣ: ವಕೀಲಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 12:38 IST
Last Updated 24 ಡಿಸೆಂಬರ್ 2019, 12:38 IST

ಶಹಾಪುರ:ಚೆಕ್ ಬೌನ್ಸ್ ಪ್ರಕರಣದಲ್ಲಿ ವಕೀಲ ನಿಂಗಣ್ಣ ಬೇವಿನಹಳ್ಳಿ ಅವರಿಗೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಕುಲಕರ್ಣಿ ಶಿಕ್ಷೆ ವಿಧಿಸಿ ಫಿರ್ಯಾದಿದಾರನಿಗೆ ₹10.45ಲಕ್ಷ ಹಣ ಪಾವತಿಸುವಂತೆ ಆದೇಶ ನೀಡಿದ್ದಾರೆ.

ನಗರದ ಅಬ್ದುಲ್ ಕರೀಂ ಎನ್ನುವರ ಬಳಿ ವರ್ಷದ ಹಿಂದೆ ₹5.25ಲಕ್ಷ ಕೈಗಡ ಹಣ ಪಡೆದುಕೊಂಡಿದ್ದರು. ಹಣ ನೀಡುವಂತೆ ಒತ್ತಾಯಿಸಿದಾಗ ಆರೋಪಿ ಚೆಕ್ ನೀಡಿದ್ದರು. ಬ್ಯಾಂಕ್‌ ತೆರಳಿ ಚೆಕ್ ನಗದೀಕರಿಸಲು ತೆರಳಿದಾಗ ಚೆಕ್ ಅಮಾನ್ಯಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT