
ಖಾನಹಳ್ಳಿ (ಯರಗೊಳ): ‘ಮಕ್ಕಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಸಾಧಿಸಲು ಮತ್ತು ದೃಢೀಕರಿಸಲು ಈ ಕಲಿಕಾ ಹಬ್ಬ ಉತ್ತಮ ವೇದಿಕೆಯಾಗಿದೆ ಎಂದು’ ಕ್ಷೇತ್ರ ಶಿಕ್ಷಣಾಧಿಕಾರಿ
ವೀರಪ್ಪ ಜಿ ಕನ್ನಳ್ಳಿ ಹೇಳಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025- 26 ನೇ ಸಾಲಿನ ಅಲ್ಲಿಪೂರ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಕಲಿಕಾ ಹಬ್ಬದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಣಬಸಪ್ಪ ಪಾಕರೆಡ್ಡಿ ಮಾತನಾಡಿ, ‘ನಿವೃತ್ತ ಶಿಕ್ಷಕರು ನಮ್ಮ ಹಬ್ಬಕ್ಕೆ ಬಂದಿದ್ದು ಸಂತಸದಾಯಕವಾಗಿದೆ, ನಿರ್ಣಾಯಕರಾಗಿ ನಿಷ್ಪಕ್ಷಪಾತವಾಗಿ ಫಲಿತಾಂಶ ನೀಡುತ್ತಾರೆ’ ಎಂದರು.
ಶಿಕ್ಷಣ ಸೊಯೋಜಕರು ದೇವೇಂದ್ರಪ್ಪ ಈಟಿ ಮಾತನಾಡಿ, ‘ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಎಲ್ಲಾ ಶಿಕ್ಷಕರು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ’ ಎಂದರು.
ಕಲಿಕಾ ಹಬ್ಬದಲ್ಲಿ ಮಕ್ಕಳು ಮೆರವಣಿಗೆಯ ಮೂಲಕ ಕಲಿಕಾ ಹಬ್ಬದ ವಿಶೇಷತೆ ಹಾಡುಗಳನ್ನು ಹಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟನೆಯ ನಂತರ ಕಥೆ ಕಟ್ಟುವ , ಸಂತಸದಾಯಕ ಗಣಿತ, ಆರೋಗ್ಯ ಮತ್ತು ಪೌಷ್ಟಿಕಾಂಶ, ಕಥೆ ಹೇಳುವುದು, ಕೈ ಬರಹ ಮತ್ತು ಕ್ಯಾಲಿಗ್ರಫಿ, ಚಿತ್ರ ನೋಡಿ ವಿವರಿಸು, ಗಟ್ಟಿ ಓದು ಈ ರೀತಿಯಾ ವಿವಿಧ ಸ್ಪರ್ಧೆಗಳಲ್ಲಿ ಕ್ಲಸ್ಟರ್‌ನ ಒಂದರಿಂದ ಐದನೇ ತರಗತಿಯ ಎಫ್ಎಲ್ಎನ್ ಕಲಿಕಾ ಮಟ್ಟವನ್ನು ಆಧರಿಸಿ ಮಕ್ಕಳು ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಪಡೆದುಕೊಂಡರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಫೀಸ್ ಪಟೇಲ್ , ಚಂದ್ರಪ್ಪ ಗುಂಜನೂರ್, ಮರೆಪ್ಪ, ಸಿದ್ದರಾಮಪ್ಪ ದುಪ್ಪಲಿ, ಎಲ್ಲಪ್ಪ ಮಾಳಿಕೇರಿ, ಶಿವಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.