ADVERTISEMENT

ಈ ಬಾರಿಯೂ ಗೆಲ್ಲುವ ವಿಶ್ವಾಸ: ನಮೋಶಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 16:31 IST
Last Updated 4 ಅಕ್ಟೋಬರ್ 2020, 16:31 IST
ಶಶೀಲ್ ಜಿ. ನಮೋಶಿ
ಶಶೀಲ್ ಜಿ. ನಮೋಶಿ   

ಯಾದಗಿರಿ: 1998, 2002, 2008ರಲ್ಲಿ ಸತತ ಮೂರು ಬಾರಿ ಶಿಕ್ಷಕರು ತಮ್ಮನ್ನು ಆಯ್ಕೆ ಮಾಡಿ ಕಳಿಸಿದ್ದಾರೆ. ಈ ಬಾರಿಯೂ ತಮ್ಮನ್ನು ಗೆಲ್ಲಿಸುವ ನಿರೀಕ್ಷೆ ಇದೆ ಎಂದು ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ ನಮೋಶಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ, ಅನುದಾನಿತ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಧ್ವನಿ ಎತ್ತಿದ್ದೇನೆ. ಶಿಕ್ಷಕರ ಸಮಸ್ಯೆ ಪರಿಹರಿಸಲು ಶ್ರಮಿಸಿದ್ದೇನೆ.ಐಟಿಐ, ಅನುದಾನ ರಹಿತ ಶಾಲೆ, ವಸತಿ ಶಾಲೆ ಸೇರಿದಂತೆ ಇನ್ನಿತರ ಶಿಕ್ಷಣ ಸಂಸ್ಥೆಗಳು ಸಿ ಆ್ಯಂಡ್ ಆರ್ ರೂಲ್ಸ್ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಇದರಿಂದ ಬಡ್ತಿ ಇನ್ನಿತರ ಸಮಸ್ಯೆ ಕಾಡುತ್ತಿವೆ. ಇದು ಸರಿಯಾಗಬೇಕು. ಹೀಗಾಗಿರಾಜ್ಯದಲ್ಲಿನ ವಿವಿಧ ಹೆಸರುಗಳ ಮೇಲೆ ಆರಂಭಿಸಲಾಗಿರುವ ವಸತಿ ಶಾಲೆಗಳನ್ನು ವಿಲೀನ ಮಾಡಿ, ಸರ್ಕಾರ ವಸತಿ ಶಾಲೆಗಳ ನಿರ್ದೇಶನಾಲಯ ಸ್ಥಾಪನೆ ಮಾಡಲು ಈಗಾಗಲೇ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದೇನೆ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಲ್ಲಿ 25 ಸಾವಿರ ಶಿಕ್ಷಕ ಮತದಾರರಿದ್ದಾರೆ. ಜಿಲ್ಲೆಯಲ್ಲಿ 1,600ಕ್ಕೂ ಹೆಚ್ಚು ಮತದಾರರಿದ್ದಾರೆ. ಅ.7ರಂದು ಚುನಾವಣೆಗೆ ಕಲಬುರ್ಗಿಯಲ್ಲಿ ನಾಮಪತ್ರ ಸಲ್ಲಿಸುತ್ತಿದ್ದು, ಸಚಿವರಾದ ಕೆ.ಎಸ್.ಈಶ್ವರಪ್ಪ, ಶಶಿಕಲಾ ಜೊಲ್ಲೆ, ಮಹಾಂತೇಶ ಅವರಲ್ಲದೆ ಈ ಭಾಗದ ಶಾಸಕರು, ಸಚಿವರು, ಸಂಸದರು ಆಗಮಿಸಲಿದ್ದಾರೆ ಎಂದರು.

ADVERTISEMENT

ಪೂರಕ ಪಿಯು ಪರೀಕ್ಷೆಯ ಮೌಲ್ಯಮಾಪನಕ್ಕೆ ಅಧ್ಯಾಪಕರಿಗೆ ಬೆಂಗಳೂರಿಗೆ ಬರಲು ತಿಳಿಸಲಾಗಿದೆ. ದೂರದೂರಿಂದ ಬರಲು ಕೋವಿಡ್‌ಕಾರಣದಿಂದ ಸಮಸ್ಯೆ ಆಗುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು
ಎಂದರು.

ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷಡಾ.ಶರಣಭೂಪಾಲರಡ್ಡಿ ನಾಯ್ಕಲ್, ಪ್ರಧಾನ ಕಾರ್ಯದರ್ಶಿಗಳಾದ ದೇವಿಂದ್ರನಾಥ ನಾದ, ಗುರುಕಾಮಾ, ವೆಂಕಟರಡ್ಡಿ ಅಬ್ಬೆತುಮಕೂರ, ಲಲಿತಾ ಅನಪುರ, ವಿರೂಪಾಕ್ಷಯ್ಯ ಸ್ವಾಮಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.