ADVERTISEMENT

ಸುರಪುರ: ಸಂವಿಧಾನ ದಿನಾಚರಣೆ ವೇಳೆ ಗಲಾಟೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:48 IST
Last Updated 27 ನವೆಂಬರ್ 2025, 4:48 IST
ಸುರಪುರದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ವೇಳೆ ಅಂಬೇಡ್ಕರ್ ವೃತ್ತದಲ್ಲಿ ಗಲಾಟೆ ನಡೆಯಿತು
ಸುರಪುರದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ವೇಳೆ ಅಂಬೇಡ್ಕರ್ ವೃತ್ತದಲ್ಲಿ ಗಲಾಟೆ ನಡೆಯಿತು   

ಸುರಪುರ: ಸಂವಿಧಾನ ದಿನಾಚರಣೆ ನಿಮಿತ್ತ ತಾಲ್ಲೂಕು ಆಡಳಿತ ಬುಧವಾರ ಏರ್ಪಡಿಸಿದ್ದ ಮೆರವಣಿಗೆ ವೇಳೆ ಶಾಸಕ ರಾಜಾ ವೇಣುಗೋಪಾಲನಾಯಕ, ತಹಶೀಲ್ದಾರ್ ಎಚ್.ಎ. ಸರಕಾವಸ್ ಅವರು ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ  ವೇಳೆ ಗಲಾಟೆ ನಡೆದಿದೆ.

ಅಂಬೇಡ್ಕರ್ ವೃತ್ತದ ಹಿಂದುಗಡೆ ಇರುವ ಸರ್ಕಾರಿ ಜಮೀನಿನಲ್ಲಿ ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ಇತರ ಚಟುವಟಿಕೆಗಳಿಗಾಗಿ ಭೂಮಿ ಮಂಜೂರು ಕೋರಿ 99 ದಿನದಿಂದ ಹೋರಾಟ ಸಮಿತಿ ಧರಣಿ ನಡೆಸುತ್ತಿದೆ. ಸೌಜ್ಯನ್ಯಕ್ಕೂ ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಹೋರಾಟ ಸಮಿತಿ ಸದಸ್ಯರು ತಹಶೀಲ್ದಾರ್ ಅವರಿಗೆ ತಡೆಯೊಡ್ಡಿದರು. 

ಅಷ್ಟೊತ್ತಿಗಾಗಲೇ ಶಾಸಕರು ವೃತ್ತದ ಒಳಗೆ ಹೋಗಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದರು. ಆಗ ಗಲಾಟೆ ಅರಂಭವಾಯಿತು. ತಹಶೀಲ್ದಾರ್ ಅವರನ್ನು ಒಳಗೆ ಬಿಡುವಂತೆ ಶಾಸಕರು ಮಾಡಿದ ಮನವಿಗೆ ಹೋರಾಟಗಾರರು ಸ್ಪಂದಿಸಲಿಲ್ಲ.

ADVERTISEMENT

ಆಗ ತಳ್ಳಾಟ, ನೂಕಾಟ ಆರಂಭವಾಯಿತು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಕೊನೆಗೆ ತಹಶೀಲ್ದಾರ್ ಅವರನ್ನು ವೃತ್ತದ ಒಳಗೆ ಬಿಡಲಾಯಿತು. ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಹಿನ್ನೆಲೆಯಲ್ಲಿ 9 ಜನರ ವಿರುದ್ಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೂಮಿ ಮಂಜೂರಾತಿ ನನ್ನ ಕೈಯಲಿಲ್ಲ. ಅದು ಕಾನೂನಿಗೆ ಬಿಟ್ಟ ವಿಷಯ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಎಲ್ಲರೂ ಕಾನೂನನ್ನು ಗೌರವಿಸಬೇಕು
ರಾಜಾ ವೇಣುಗೋಪಾಲನಾಯಕ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.