ADVERTISEMENT

ಯಾದಗಿರಿ ಜಿಲ್ಲೆಯಾದ್ಯಂತ ಸಂವಿಧಾನ ಸಮರ್ಪಣಾ ದಿನಾಚರಣೆ

‘ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಮ್ಮ ಸಂವಿಧಾನ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 17:01 IST
Last Updated 26 ನವೆಂಬರ್ 2020, 17:01 IST
ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಜಿ.ಪಂ ಸಿಇಒ ಶಿಲ್ಪಾಶರ್ಮಾ, ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಇದ್ದರು
ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಜಿ.ಪಂ ಸಿಇಒ ಶಿಲ್ಪಾಶರ್ಮಾ, ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಇದ್ದರು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಂವಿಧಾನ ಸಮರ್ಪಣಾ ದಿನಾಚರಣೆ ಆಚರಿಸಲಾಯಿತು.

ಜಗತ್ತಿನಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ನಮ್ಮ ಸಂವಿಧಾನವು ನಮ್ಮ ಹೆಮ್ಮೆ. 1949ರ ನವೆಂಬರ್ 26 ರಂದು ಭಾರತೀಯರು ತಮ್ಮನ್ನು ತಾವು ಸಂವಿಧಾನಕ್ಕೆ ಶ್ರದ್ಧೆ, ನಿಷ್ಠೆಗಳಿಂದ ಸಮರ್ಪಿಸಿಕೊಂಡ ದಿನ ಎಂದು ಗಣ್ಯರು ಸ್ಮರಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣ:

ADVERTISEMENT

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾಶರ್ಮಾ ಅವರು ಜಿ.ಪಂ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಗೆ ಸಂವಿಧಾನದ ಪ್ರಸ್ತಾವನೆ ಬೋಧಿಸಿದರು.

ಬಳಿಕ ಸಂವಿಧಾನದ ಪ್ರಸ್ತಾವನೆಯನ್ನು ವಿವರಿಸುತ್ತ ಮಾತನಾಡಿದ ಸಿಇಒ ಶಿಲ್ಪಾ ಶರ್ಮಾ, ಜನವರಿ 26, 1950 ರಂದು ನಮ್ಮ ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದಿದ್ದು, ಅಂದಿನಿಂದ ಇಂದಿನವರೆಗೂ ಸದೃಢವಾಗಿ ನಿಂತಿರುವುದು ಅದರ ಸಶಕ್ತತೆಗೆ, ಜೀವಂತಿಕೆಗೆ ಸಾಕ್ಷಿಯಾಗಿದೆ
ಎಂದರು.

ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಮುಖ್ಯ ಯೋಜನಾಧಿಕಾರಿ ಸುನಿಲ್ ಬಿಸ್ವಾಸ್ ಅವರು ಮಾತನಾಡಿದರು. ಯೋಜನಾ ನಿರ್ದೇಶಕ ಗುರುನಾಥ ಗೌಡಪ್ಪನವರ್, ಲೆಕ್ಕಾಧಿಕಾರಿ ವೆಂಕಟೇಶ, ಜಿ.ಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.‌

ಪದವಿ ಮಹಾವಿದ್ಯಾಲಯ:

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಸಂವಿಧಾನ ಸಮರ್ಪಣ ದಿನಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪ್ರಾಧ್ಯಾಪಕ ಡಾ.ಸರ್ವೋದಯ ಶಿವುಪುತ್ರ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲೇಜಿನ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಡಾ. ದೇವೀಂದ್ರಪ್ಪ ಹಳಿಮನಿ ವಿಶೇಷ ಉಪನ್ಯಾಸ
ನೀಡಿದರು.

ಈ ವೇಳೆ ಶರಣಬಸಪ್ಪ ರಾಯಿಕೋಟಿ, ಡಾ.ಮೋನಯ್ಯ ಕಲಾಲ, ಬಿ.ಆರ್.ಕೇತನಕರ್, ಡಾ. ಜೆಟ್ಟೆಪ್ಪ ಡಿ., ಡಾ. ಚಂದ್ರಶೇಖರ ಕೊಂಕಲ್, ಡಾ. ಅಶೋಕರೆಡ್ಡಿ ಪಾಟೀಲ, ದವಲಪ್ಪ, ಡಾ. ಮೊಗಲಪ್ಪ, ಚನ್ನಬಸಪ್ಪ ಓಡ್ಕರ್‌ಇದ್ದರು. ಪ್ರಹ್ಲಾದ ಜೋಶಿ ಪ್ರಾರ್ಥನೆ ಹಾಡಿದರು.ಉಮೇಶ ನಿರೂಪಿಸಿ, ವಂದಿಸಿದರು.ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಬಿ️ಜೆಪಿ ಕಾರ್ಯಾಲ️ಯ:

ಸಂವಿಧಾನ ದಿನದ ಅಂಗವಾಗಿ ನಗರದ ಬಿ️ಜೆಪಿ ಜಿಲ್ಲಾ ಕಾರ್ಯಾಲ️ಯದಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಬಿ️ಜೆಪಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲ️ರೆಡ್ಡಿ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ, ಮಾತನಾಡಿದರು.

ಈವೇಳೆನಗರಸಭೆ ಸದಸ್ಯರಾದ ಹನುಮಂತ ಇಟಗಿ, ಮಾರುತಿ ಕಲಾಲ, ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮನೋಹರ್ ಪವರ್, ಜಿಲ್ಲಾ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಸುರೇಶ್ ಚಾವ್ಹಾಣ, ಶಿವರಾಜ ದಾಸನಕೇರಿ, ಸುನಿತಾ ಚವ್ಹಾಣ್, ಚಂದ್ರ ಮುಂಡರಗಿ ಇದ್ದರು.

ನ್ಯೂ ಕನ್ನಡ ಪದವಿ ಪೂರ್ವ ಕಾಲೇಜು:

ನಗರದ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಂ.ಕೆ.ಬೀರನೂರು ನುಡಿದರು.

ಉಪನ್ಯಾಸಕ ಮಲ್ಲಿಕಾರ್ಜುನ ಅಂಗಡಿ ಸಂವಿಧಾನದ ಪೀಠಿಕೆ ಓದಿದರು. ಕಾಲೇಜಿನ ಪ್ರಾಚಾರ್ಯ ವೆಂಕಟರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರಾದ ರಘುನಾಥರೆಡ್ಡಿ ಪಾಟೀಲ, ಪ್ರಕಾಶ ರೆಡ್ಡಿ, ಅಶೋಕ ಅವಂಟಿ, ರೀನಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.