ಪ್ರಾತಿನಿಧಿಕ ಚಿತ್ರ
ಯಾದಗಿರಿ: ಹತ್ತಿ ಮಿಲ್ ಮಾಲೀಕನಿಗೆ ವಂಚಿಸಿ ₹37.57 ಲಕ್ಷ ಮೌಲ್ಯದ 246 ಕ್ವಿಂಟಲ್ ಹತ್ತಿ ಕಳವು ಮಾಡಿದ ಆರೋಪದಡಿ ಲಾರಿ ಮಾಲೀಕ, ಚಾಲಕ ಸೇರಿ ಮೂವರ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ರಾಂಪುರ ಗ್ರಾಮದ ಮುಂದಕಲ್ ಬಾಬು ಕಾಟನ್ ಜಿನ್ನಿಂಗ್ ಮಿಲ್ ಮಾಲೀಕ ಸಿದ್ಧಾರ್ಥ ಬಾಬು ಅವರು ಮಹಾರಾಷ್ಟ್ರದ ಲಾರಿ ಮಾಲೀಕ ಪಿಂಜಾರಿ ಜುನೇದ್, ಮಧ್ಯಪ್ರದೇಶದ ಲಾರಿ ಚಾಲಕ ಜುಬೇರ್ ಖಾನ್ ಹಾಗೂ ಟ್ರಾನ್ಸ್‌ಪೋರ್ಟ್ ಮಾಲೀಕ ಕಮಲ ಕಿಶೋರ್ ವಿರುದ್ಧ ದೂರು ನೀಡಿದ್ದಾರೆ.
ಸಿದ್ಧಾರ್ಥ ಅವರು ರಾಜಸ್ಥಾನದ ಕಾಂಚನ್ ಇಂಡಿಯಾ ಲಿಮಿಟೆಡ್‌ಗೆ ತಲುಪಿಸುವಂತೆ ₹37.57 ಲಕ್ಷ ಮೌಲ್ಯದ 246 ಕ್ವಿಂಟಲ್ ಹತ್ತಿಯನ್ನು ಜುಬೇರ್ ಚಲಾಯಿಸುತ್ತಿದ್ದ ಲಾರಿಯಲ್ಲಿ ತುಂಬಿದ್ದರು. ಕಾಂಚನ್ ಕಂಪನಿಗೆ ಹತ್ತಿಯನ್ನು ತಲುಪಿಸದೆ ಬೇರೆಡೆ ಒಯ್ದು ಚಾಲಕ ಸೇರಿ ಮೂವರು ಕಳ್ಳತನ ಮಾಡಿದ್ದಾರೆ. ಅವರ ಫೋನ್ ನಂಬರ್‌ಗಳು ಸಹ ಸ್ವಿಚ್ ಆಫ್ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.