ಸಾಂದರ್ಭಿಕ ಚಿತ್ರ
ಯಾದಗಿರಿ: ‘ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯು ವಿಜ್ಞಾನ ವಿಭಾಗಕ್ಕೆ 2026–27ನೇ ಸಾಲಿನ ಶುಲ್ಕ ವಿನಾಯಿತಿಗಾಗಿ ಮಾರ್ಚ್ 1ರಂದು ಪ್ರವೇಶ ಪರೀಕ್ಷೆ ನಡೆಸಲಾಗುವುದು’ ಎಂದು ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ ತಿಳಿಸಿದರು.
‘ಅಂದು ಬೆಳಿಗ್ಗೆ 10.30ರಿಂದ 12ರ ವರೆಗೆ ಸಂಸ್ಥೆಯ ಯಾದಗಿರಿ, ಶಹಾಪುರ, ದೋರನಹಳ್ಳಿ ಹಾಗೂ ವಡಗೇರಾ ಕಾಲೇಜುಗಳಲ್ಲಿ ನಡೆಯಲಿದೆ. ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವವರು ಅಥವಾ ಬರೆದಿರುವ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಿ ಆಗಬಹುದು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಪಿಯು ಪಠ್ಯ ಆಧಾರಿತವಾಗಿ ಇರಲಿದೆ. ಭೌತವಿಜ್ಞಾನ, ರಸಾಯಾನವಿಜ್ಞಾನ, ಜೀವವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ತಲಾ 15 ಅಂಕಗಳು ಸೇರಿ ಒಟ್ಟು 60 ಅಂಕಗಳಿಗೆ ಉತ್ತರಿಸಬೇಕು. ಈ ಪ್ರವೇಶ ಪರೀಕ್ಷೆಯ ಅಂಕಗಳು ಮತ್ತು ಪ್ರಥಮ ಪಿಯು ವಾರ್ಷಿಕ ಪರೀಕ್ಷೆಯ ಅಂಕಗಳನ್ನು ಸೇರಿಸಿ ಮೆರಿಟ್ ಆಧಾರದ ಮೇಲೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗುವುದು’ ಎಂದರು.
‘ಬೇಸಿಗೆ ರಜೆಯಲ್ಲಿ ದ್ವಿತೀಯ ಪಿಯು ತರಗತಿಗಳನ್ನು ತೆಗೆದುಕೊಂಡು ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬೋಧನೆ ಮಾಡಲಾಗುವುದು. ದ್ವಿತೀಯ ಪಿಯು ಪರೀಕ್ಷೆ ಮುಗಿದ ಬಳಿಕ ಮಾ.17ರಿಂದ ನೀಟ, ಕೆ–ಸಿಇಟಿ, ಕ್ರಾಶ್‌ಕೋರ್ಸ್, ದೀರ್ಘಾವಧಿ ತರಗತಿಗಳನ್ನು ನಡೆಸಲಾಗುವುದು. ಪ್ರತ್ಯೇಕ ನೋಟ್ಸ್ ಕೊಟ್ಟು, ಪ್ರತಿ ಶನಿವಾರ ಮಾದರಿ ನೀಟ್ ಪರೀಕ್ಷೆ ಹಾಗೂ ಪ್ರತಿ ತಿಂಗಳು ಎರಡು ಕಿರು ಪರೀಕ್ಷೆ ನಡೆಸಲಾಗುವುದು’ ಎಂದು ಹೇಳಿದರು.
ಮಾಹಿತಿಗೆ ಮೊಬೈಲ್ ಸಂಖ್ಯೆ 9538514161 (ಯಾದಗಿರಿ), 9482907199 (ಶಹಾಪುರ), 9902777109 (ದೋರನಹಳ್ಳಿ) ಹಾಗೂ 9686307517ಗೆ (ವಡಗೇರಾ) ಸಂಪರ್ಕಿಸಬಹುದು ಎಂದು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿಡಿಯು ಪಿಯು ಯಾದಗಿರಿ ಕಾಲೇಜಿನ ಪ್ರಾಂಶುಪಾಲ ಗೋಪಾಲಕೃಷ್ಣ, ಸಿಬ್ಬಂದಿ ವೆಂಕಟೇಶ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.