ADVERTISEMENT

ಹುಣಸಗಿ: ಸೇತುವೆ ದುಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 15:42 IST
Last Updated 29 ಸೆಪ್ಟೆಂಬರ್ 2020, 15:42 IST
ಹುಣಸಗಿ ಸಮೀಪದ ಚಿಕನಳ್ಳಿ ಗ್ರಾಮದ ಬಳಿಯ ಹಳ್ಳಕ್ಕೆ ನಿರ್ಮಿಸಲಾಗಿದ್ದ ಸೇತುವೆ ಕೊಚ್ಚಿ ಹೋಗಿರುವುದು
ಹುಣಸಗಿ ಸಮೀಪದ ಚಿಕನಳ್ಳಿ ಗ್ರಾಮದ ಬಳಿಯ ಹಳ್ಳಕ್ಕೆ ನಿರ್ಮಿಸಲಾಗಿದ್ದ ಸೇತುವೆ ಕೊಚ್ಚಿ ಹೋಗಿರುವುದು   

ಹುಣಸಗಿ: ಸಮೀಪದ ಹೆಬ್ಬಾಳ ಗ್ರಾಮದಿಂದ ಚಿಕನಳ್ಳಿ ಮಾರ್ಗವಾಗಿ ಸುರಪುರಕ್ಕೆ ತರಳುವ ಸೇತುವೆ ಕೊಚ್ಚಿ ಹೋಗಿದ್ದು, ಕೂಡಲೇ ಅಧಿಕಾರಿ ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮುದ್ದಣ್ಣ ಅಮ್ಮಾಪುರ ಆಗ್ರಹಿಸಿದ್ದಾರೆ.

ಚಿಕನಳ್ಳಿ ಗ್ರಾಮದ ಬಳಿ ಇರುವ ಹಿರೇ ಹಳ್ಳಕ್ಕೆ ಈ ಸೇತುವೆ ನಿರ್ಮಿಸಲಾಗಿತ್ತು. ಆದರೆ, ಕಳೆದ ಒಂದು ವಾರದಿಂದ ಸುರಿದ ಅಪಾರ ಮಳೆಯಿಂದಾಗಿ ಈ ಸೇತುವೆ ಕೊಚ್ಚಿಹೋಗಿದೆ. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ವಾಹನಗಳ ಸಂಚಾರಕ್ಕೂ ತೊಂದರೆ ಪಡುವಂತಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಜನರು ತೊಂದರೆ ಪಡುವಂತಾಗಿದೆ. ತಾತ್ಕಾಲಿಕವಾಗಿ ಈ ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಶಾಶ್ವತ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಶಂಕರ ಜಾಧವ, ಮೌನೇಶ ಪೂಜಾರಿ, ಸಾಹೇಬಲಾಲ, ಬಸಯ್ಯ ಮುತ್ಯಾ ನಂದಿಕೋಲ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT