ADVERTISEMENT

ಹಲ್ಲೆ: ಪೊಲೀಸ್ ಸಿಬ್ಬಂದಿ ಅಮಾನತಿಗೆ ಆಗ್ರಹ

ಸುರಪುರದಲ್ಲಿ ಕಬ್ಬಲಿಗ ಸಮಾಜ ಮುಖಂಡರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 7:00 IST
Last Updated 3 ನವೆಂಬರ್ 2021, 7:00 IST
ಸುರಪುರದಲ್ಲಿ ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಬುಡಕಟ್ಟು ಹೋರಾಟ ಸಂಘದ ಮುಖಂಡರು ಹಲ್ಲೆ ಖಂಡಿಸಿ ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಸುರಪುರದಲ್ಲಿ ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಬುಡಕಟ್ಟು ಹೋರಾಟ ಸಂಘದ ಮುಖಂಡರು ಹಲ್ಲೆ ಖಂಡಿಸಿ ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಸುರಪುರ: ಯುವ ಮುಖಂಡ ದುಂಡಪ್ಪ ಜಮಾದಾರ ಮೇಲೆ ಹಲ್ಲೆ ನಡೆಸಿದ ಕಲಬುರಗಿಯಚೌಕ್ ಪೊಲೀಸ್ ಠಾಣೆಯ ಪೊಲೀಸ್ ಇನ್‍ಸ್ಪೆಕ್ಟರ್ ಹಾಗೂ 6 ಸಿಬ್ಬಂದಿಯ ಅಮಾನತಿಗೆ ಆಗ್ರಹಿಸಿ ಇಲ್ಲಿನ ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ಅಂಬಿಗ, ಭೋಯಿ, ಬೆಸ್ತ ಬುಡಕಟ್ಟು ಹೋರಾಟ ಸಂಘದ ಮುಖಂಡರು ಮಂಗಳವಾರ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಮುಖಂಡ ಹೊನ್ನಪ್ಪ ತಳವಾರ ಮಾತನಾಡಿ, ‘ಕಬ್ಬಲಿಗ ಸಮಾಜದ ಯುವ ಮುಖಂಡ ದುಂಡಪ್ಪ ಸಿದ್ರಾಮಪ್ಪ ಜಮಾದಾರ ಪಿಸ್ತೂಲ್ ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಬಂಧಿಸಿ ಠಾಣೆಯಲ್ಲಿ ಪೊಲೀಸರು ಮನ ಬಂದಂತೆ ಹಲ್ಲೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವಿಂದ್ರಪ್ಪಗೌಡ ಮಾಲಿ ಪಾಟೀಲ ದೇವರಗೋನಾಲ ಮಾತನಾಡಿ, ‘ಹಲ್ಲೆಗೊಳಗಾದ ದುಂಡಪ್ಪ ಜಮಾದಾರ ಕಲಬುರಗಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಅವರ ಮೇಲೆ ಯಾವುದೇ ಪ್ರಕರಣ ಇಲ್ಲದಿದ್ದರೂ ಕೂಡ ವಿನಾ ಕಾರಣ ಅವರನ್ನು ಬಂಧಿಸಿ ಅವರ ಘನತೆಗೆ ಧಕ್ಕೆ ತರಲಾಗಿದೆ’ ಎಂದು ದೂರಿದರು.

ADVERTISEMENT

ಮೌನೇಶ ಆರ್.ಭೋವಿ ಮಾತನಾಡಿ, ‘ಪೊಲೀಸರ ಮೇಲೆ ತಕ್ಷಣ ಕೊಲೆ ಯತ್ನ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ, ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು. ವಿಳಂಬ ನೀತಿ ಅನುಸರಿಸಿದರೆ ರಾಜ್ಯದಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.

ಲಕ್ಷ್ಮಣ ಕಮತಗಿ, ವೆಂಕಟೇಶ ದೊಡ್ಡಮನಿ, ಮಂಜುನಾಥ ಮುದ್ನೂರು, ವೆಂಕಟೇಶ ಚಟ್ನಳಿ, ದೊಡ್ಡಪ್ಪ ಮುದ್ನೂರು, ದೇವಿಂದ್ರಪ್ಪ ಮಾಚಗುಂಡಾಳ, ಯಲ್ಲಪ್ಪ ನಗನೂರ, ಮಲ್ಲು, ಶ್ರೀಕಾಂತ ರತ್ತಾಳ, ಭೈರಣ್ಣ ಅಂಬಿಗೇರ, ಮರೆಪ್ಪ ವೆಂಕಟಾಪುರ, ನಿಂಗು ಕಮತಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.