ADVERTISEMENT

ಯಾದಗಿರಿ | ‘ಅವಕಾಶಗಳ ಸದ್ಬಳಕೆಯಿಂದ ಅಭಿವೃದ್ಧಿ’

ಅಗವಿಕಲರಿಗೆ ಸಲಕರಣೆಗಳ ವಿತರಣೆ; ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:13 IST
Last Updated 16 ಡಿಸೆಂಬರ್ 2025, 7:13 IST
ಯಾದಗಿರಿ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಉಪಯುಕ್ತ ಸಲಕರಣೆಗಳನ್ನು ನ್ಯಾ.ಹೇಮಲೇಖ ವಿತರಿಸಿದರು. ನ್ಯಾ.ಟಿ.ಎನ್. ದಿನೇಶಕುಮಾರ, ನ್ಯಾ.ಮರುಳಸಿದ್ಧಾರಾಧ್ಯ, ನ್ಯಾ.ಮರಿಯಪ್ಪ ಉಪಸ್ಥಿತರಿದ್ದರು
ಯಾದಗಿರಿ ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಭಾನುವಾರ ಜರುಗಿದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಉಪಯುಕ್ತ ಸಲಕರಣೆಗಳನ್ನು ನ್ಯಾ.ಹೇಮಲೇಖ ವಿತರಿಸಿದರು. ನ್ಯಾ.ಟಿ.ಎನ್. ದಿನೇಶಕುಮಾರ, ನ್ಯಾ.ಮರುಳಸಿದ್ಧಾರಾಧ್ಯ, ನ್ಯಾ.ಮರಿಯಪ್ಪ ಉಪಸ್ಥಿತರಿದ್ದರು   

ಯಾದಗಿರಿ: ‘ಅವಕಾಶಗಳ ಸದ್ಬಳಕೆಯಿಂದ ಅಂಗವಿಕಲರ ಅಭಿವೃದ್ಧಿ ಸಾಧ್ಯ. ಅಂಗವಿಕಲರಿಗೆ ನೀಡುತ್ತಿರುವ ಸಲಕರಣೆಗಳು ಉಪಯುಕ್ತವಾಗಲಿ. ಇದು ದಾನ ಅಲ್ಲ, ಅಂಗವಿಕಲರ ಮನೆ ಬಾಗಿಲಿಗೆ ಬಂದು ನ್ಯಾಯ ಒದಗಿಸಲು ಮತ್ತು ತಮ್ಮೊಂದಿಗೆ ಸಂತಸ ಹಂಚಿಕೊಳ್ಳಲು ವಿತರಿಸಲಾಗಿದೆ’ ಎಂದು ಹೈಕೋರ್ಟ್ ನ್ಯಾಯಾದೀಶರೂ ಆಗಿರುವ ಯಾದಗಿರಿ ಆಡಳಿತಾತ್ಮಕ ನ್ಯಾಯಾದೀಶೆ ಹೇಮಲೇಖ ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಯೀಮ್ಸ್, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಎಪಿಡಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಸಾರ್ವತ್ರಿಕ ಆರೋಗ್ಯ ರಕ್ಷಣೆ ದಿನ ಹಾಗೂ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆ ಹಿನ್ನಲೆ ವಿಶೇಷ ಚೇತನರಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ, ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ’ದಲ್ಲಿ ಅವರು ಮಾತನಾಡಿದರು.

ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಂದೀಪ ಪಾಟೀಲ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಕಾಳಜಿ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆಯ ಸಹಕಾರದಿಂದ ವಿವಿಧ ಸಲಕರಣೆಗಳನ್ನು ವಿತರಿಸಲಾಗಿದೆ. ನಮ್ಮ ಜಿಲ್ಲೆ ಯುಡಿಐಡಿ ಕಾರ್ಡ್‌ ವಿತರಣೆಯಲ್ಲಿ ರಾಜ್ಯ ಮಟ್ಟದಲ್ಲಿ ಹನ್ನೆರಡನೇ ಸ್ಥಾನದಲ್ಲಿದೆ’ ಎಂದು ಹೇಳಿದರು.

ADVERTISEMENT

ಸೆಕ್ಯುರಿಟ್ ಅಪೆಲೆಟ್ ಟ್ರಿಬ್ಯುನಲ್‌ನ ನ್ಯಾಯಮೂರ್ತಿ ಟಿ.ಎನ್. ದಿನೇಶಕುಮಾರ ಮಾತನಾಡಿ, ‘ಅರ್ಹ ಎಲ್ಲಾ ಅಂಗವಿಕಲರಿಗೂ ಇಂತಹ ಉಪಯುಕ್ತ ಸಲಕರಣೆ ದೊರೆಯಬೇಕು. ಅರ್ಹರಿಗೆ ಯುಡಿಐಡಿ ಕಾರ್ಡ್ ವಿತರಣೆಯಲ್ಲಿ ಮುಂದಿನ ದನಗಳಲ್ಲಿ ಈ ಜಿಲ್ಲೆ ಮೊದಲನೇ ಸ್ಥಾನ ಪಡೆಯುವತಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಕೀಲ ಬಸವರಾಜ ಪಾಟೀಲ ಕ್ಯಾತನಾಳ, ‘ಭಾರತೀಯತೆ ಹಾಗೂ ವೈಜ್ಞಾನಿಕತೆ’ ಕೃತಿಯನ್ನು ಬಿಡುಗಡೆಗೊಳಿಸಿದರು.

23 ಜನರಿಗೆ ವ್ಹೀಲ್ ಚೇರ್, ಸ್ಟಿಕ್, ಯುಡಿಐಡಿ ಕಾರ್ಡ್‌ ಸೇರಿದಂತೆ ಇತರೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನಾ ಸಹಾಯಕಿ ನಾಗಮ್ಮ, ಎಪಿಡಿ ಸಂಸ್ಥೆ ಸಂಯೋಜಕ ನಾಗಪ್ಪ, ರಮೇಶ ಕಟ್ಟಿಮನಿ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮರುಳಸಿದ್ಧಾರಾಧ್ಯ ಸ್ವಾಗತಿಸಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಎಸ್.ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.