ADVERTISEMENT

ಅದ್ದೂರಿ ಮೆರವಣಿಗೆಯೊಂದಿಗೆ ಗಣೇಶ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 15:45 IST
Last Updated 12 ಸೆಪ್ಟೆಂಬರ್ 2024, 15:45 IST
ನಾರಾಯಣಪುರದ ಯುಕೆಪಿ ಕ್ಯಾಂಪ್ ಕಾಲೊನಿಯಲ್ಲಿ ಗಜಾನನ ಯುವಕ ಮಂಡಳಿಯವರು ಬುಧವಾರ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ವಿತರಿಸಲಾಯಿತು
ನಾರಾಯಣಪುರದ ಯುಕೆಪಿ ಕ್ಯಾಂಪ್ ಕಾಲೊನಿಯಲ್ಲಿ ಗಜಾನನ ಯುವಕ ಮಂಡಳಿಯವರು ಬುಧವಾರ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ವಿತರಿಸಲಾಯಿತು   

ನಾರಾಯಣಪುರ: ಸ್ಥಳೀಯ ಗಜಾನನ ಯುವಕ ಮಂಡಳಿಯವರಿಂದ ವಿವಿದೆಢೆ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಬುಧವಾರ ರಾತ್ರಿ ಭಕ್ತ ಗಣದ ಮಧ್ಯೆ ಅದ್ದೂರಿ ಮೆರವಣಿಗೆಯೊಂದಿಗೆ ಪಟಾಕಿ ಸಿಡಿಸಿ, ಪ್ರಸಾದ ವಿತರಣೆಯೊಂದಿಗೆ ವಿಸರ್ಜನಾ ಕಾರ್ಯ ನೆರವೇರಿಸಲಾಯಿತು.

ಪ್ರತಿಷ್ಠಾಪಿತ ಗಣೇಶನಿಗೆ ಐದು ದಿನಗಳ ಕಾಲ ನಿತ್ಯ ಬೆಳಿಗ್ಗೆ, ಸಂಜೆ ವೇಳೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಲಾಯಿತು.

ಬಹುಮಾನ ವಿತರಣೆ: ಇಲ್ಲಿನ ಯುಕೆಪಿ ಕ್ಯಾಂಪ್ ಕಾಲೊನಿಯಲ್ಲಿ ಗಜಾನನ ಯುವಕ ಮಂಡಳಿಯವರು ಬುಧವಾರ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು

ADVERTISEMENT

ಗ್ರಾ.ಪಂ ಅಧ್ಯಕ್ಷ ಹಣಮಂತ ಕಬಡರ, ಸುರೇಶ ನಾಯಕ, ಅಮರೇಶ ಕೋಳೂರ, ಉದಯ ವನಕುದರಿ, ಬಸವರಾಜ ಯಾದವಾಡ, ನಾಗರಾಜ ಹುಡೇದ, ಕಿರಣ ಜೋಶಿ, ಶರಣಗೌಡ, ಹುಸೇನ, ಚನ್ನಮಲ್ಲಪ್ಪ ಬಲಕುಂದಿ, ಸಂಗು ನಾವದಗಿ, ಅಮರೇಶ ತಾಳಿಕೋಟಿ, ಮಲ್ಲು ಕಂಬಳಿ ಸೇರಿದಂತೆ ಕಾಲೊನಿಯ ಗಜಾನನ ಭಕ್ತರು ಉಪಸ್ಥಿತರಿದ್ದರು.

ಗಣೇಶನ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಗಜಾನನ ಯುವಕ ಮಂಡಳಿಯಿಂದ ಅನ್ನಸಂತರ್ಪಣೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.