ADVERTISEMENT

ಯಾದಗಿರಿ: 12 ಶಿಕ್ಷಕ, ಶಿಕ್ಷಕಿಯರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 4:03 IST
Last Updated 5 ಸೆಪ್ಟೆಂಬರ್ 2020, 4:03 IST

ಯಾದಗಿರಿ: ಜಿಲ್ಲೆಯಲ್ಲಿ 12 ಶಿಕ್ಷಕ, ಶಿಕ್ಷಕಿಯರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ. ಮೂರು ವಿಭಾಗಗಳಲ್ಲಿ ಪ್ರಶಸ್ತಿಯನ್ನು ವಿಂಗಡಿಸಲಾಗಿದೆ. (ಸೆಪ್ಟೆಂಬರ್ 7) ಸೋಮವಾರ ಮಧ್ಯಾಹ್ನ 2 ಗಂಟೆಗೆ ನಗರದ ಮೆಥೋಡಿಸ್ಟ್‌ ಚರ್ಚ್‌ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪ್ರಾಥಮಿಕ ಹಂತದಲ್ಲಿ ಮೂವರು, ಹಿರಿಯ ಪ್ರಾಥಮಿಕ ಹಂತದಲ್ಲಿ 4, ಪ್ರೌಢಶಾಲಾ ಹಂತದಲ್ಲಿ 5 ಶಿಕ್ಷಕರಿಗೆ ಪ್ರಶಸ್ತಿ ಸಂದಿದೆ.

ಪ್ರಾಥಮಿಕ ವಿಭಾಗದಲ್ಲಿ ಖಮರುನ್ನೀಸಾ ಬೇಗಂ, ಲಲತಮ್ಮ, ಸುರೇಶ, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಾವಿತ್ರಿ, ಸಾಮುವೇಲ್‌, ಸಿದ್ದಪ್ಪ ದನಗೊಂಡ, ರಾಮಚಂದ್ರ, ಪ್ರೌಢಶಾಲಾ ವಿಭಾಗದಲ್ಲಿ ಮಹಾವೀರ, ನಾಗನಗೌಡ, ಶಿವಲಿಂಗಪ್ಪ ಮಾರನಾಳ, ನಹೀದ ಅಂಜುಮಾ, ಅನುಪಮಾ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.