ADVERTISEMENT

ಶಹಾಪುರ | ವರದಕ್ಷಿಣೆ ಕಿರುಕುಳ: 2 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:56 IST
Last Updated 28 ಜುಲೈ 2024, 15:56 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಶಹಾಪುರ: ಪತ್ನಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿರುವುದು ಸಾಬೀತು ಆಗಿರುವದರಿಂದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶೋಭಾ ಅವರು ಶನಿವಾರ ನಾಲ್ವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ.

ನಗರದ ಲಕ್ಷಿಕಾಂತ, ಮಾನಪ್ಪ, ಭೂದೇವಿ ಹಾಗೂ ಮಾಲಾ ಶಿಕ್ಷೆಗೆ ಒಳಗಾದ ವ್ಯಕ್ತಿಗಳು. 2022 ಅಕ್ಟೋಬರ 31ರಂದು ಲಕ್ಷ್ಮಿಕಾಂತ ಎಂಬುವವರು ಪತ್ನಿ ಮಂಜುಳಾ ಅವರಿಗೆ ತವರು ಮನೆಯಿಂದ ವರದಕ್ಷಣೆ ತರುವಂತೆ ಕಿರುಕುಳ ನೀಡಿದ್ದರು. ಅದಕ್ಕೆ ಉಳಿದ ಮೂವರು ಸಹಕಾರ ನೀಡಿದ್ದರು ಎಂದು ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ತನಿಖಾಧಿಕಾರಿಯಾಗಿದ್ದ ಮರೆಪ್ಪ ಎ.ಎಸ್.ಐ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು. ದೂರುದಾರರ ಪರವಾಗಿ ಎಪಿಪಿ ದಿವ್ಯಾರಾಣಿ ನಾಯಕ ಸುರಪುರ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.