
ಯಾದಗಿರಿ: ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ (ಡಿಎಸ್‌ಎಸ್) ಮತ್ತು ಎದ್ದೆಳು ಕರ್ನಾಟಕ ಸಂಘಟನೆಯ ಜಿಲ್ಲಾ ಮುಖಂಡರು ‘ಮನುಸ್ಮೃತಿ ದಹನ ದಿನ’ವನ್ನು ಆಚರಿಸಿದರು.
1927ರ ಡಿಸೆಂಬರ್ 25ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ಅಸಮಾನತೆಯನ್ನು ಸಾರುವ ಮನುಸ್ಮೃತಿಯನ್ನು ದಹಿಸಿದ ನೆನಪಿಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಮುಖಂಡರು ಹೇಳಿದರು.
ಅಂಬೇಡ್ಕರ್ ಅವರು ಮನಸ್ಕೃತಿ ಸುಟ್ಟು ಹಾಕಿದ ಐತಿಹಾಸಿಕ ದಿನವಾಗಿದೆ. ಉಚ್ಚ, ನೀಚ, ಅಸ್ಪೃಶ್ಯ ಮೇಲು ಕೀಳಿನ ಸಂಹಿತೆಗೆ ಬೆಂಕಿ ಇರಿಸಿ 98 ವರ್ಷಗಳು ಕಳೆದಿವೆ. ಸಮಾನತೆಯ ಜ್ಯೋತಿಯನ್ನು ಬೆಳಗಲು ಪ್ರತಿ ವರ್ಷ ಡಿ.25ರಂದು ಮನಸ್ಮೃತಿ ಪ್ರತಿಕೃತಿ ಸುಡಲಾಗುತ್ತಿದೆ. ದೇಶದಲ್ಲಿನ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ಅಳಿಯಬೇಕು ಎಂದರು.
ಈ ವೇಳೆ ಡಿಎಸ್‌ಎಸ್ ಮುಖಂಡರಾದ ಮರೆಪ್ಪ ಚಟ್ಟರಕ, ಚಂದ್ರಕಾಂತ ಮುನಿಯಪ್ಪನವರ, ಸೈದಪ್ಪ ಕೋಳೂರು, ನಾಗರಾಜ, ಗೋಪಾಲ ತೆಳಗೇರಿ, ಭಗವಂತ ಅನ್ವರ್, ನಿಂಗಪ್ಪ ಕೊಲ್ಲೂರು, ಭೀಮಣ್ಣ ಹೊಸಮನಿ, ಭೀಮರಾಯ ಠಾಣಾಗುಂದಿ, ಮಹಾದೇವಪ್ಪ ಬಿಜಾಸ್ಪರು, ವಸಂತ, ಮಂಜುನಾಥ ಬುಸಣಗಿ, ಗೌತಮ ಕ್ರಾಂತಿ, ಮಹಾದೇವಪ‍್ಪ ಬಿಜಸ್ಪೊರ, ಸಂತೋಷ ನಿರ್ಮಲಕಲರ,