ADVERTISEMENT

ಮದುವೆ ಮಂಟಪದಲ್ಲಿ ಪರಿಸರ ಕಾಳಜಿ

ನವ ದಂಪತಿಯಿಂದ ಅತಿಥಿಗಳಿಗೆ ಸಸಿಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 16:54 IST
Last Updated 10 ಜನವರಿ 2021, 16:54 IST
ಯರಗೋಳ ಸಮೀಪದ ಬೆಳಗೇರಾ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಗಿಡಗಳನ್ನು ವಿತರಿಸಲಾಯಿತು
ಯರಗೋಳ ಸಮೀಪದ ಬೆಳಗೇರಾ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಗಿಡಗಳನ್ನು ವಿತರಿಸಲಾಯಿತು   

ಯರಗೋಳ: ಬೆಳಗೇರಾ ಗ್ರಾಮದಲ್ಲಿ ಭಾನುವಾರ ನಡೆದ ಪರಿಸರ ಕಾಳಜಿ ಮದುವೆಯಲ್ಲಿ ನವದಂಪತಿ ವೆಂಕಟೇಶ ಮತ್ತು ಚಾಮುಂಡೇಶ್ವರಿ ತಮ್ಮನ್ನು ಶುಭ ಹಾರೈಸಿದ ಬಂಧುಗಳು, ಆಪ್ತರು ಮತ್ತು ಸ್ನೇಹಿತರಿಗೆ ವಿವಿಧ ಬಗೆಯ ಸಸಿಗಳನ್ನು ನೀಡಿದರು.

ಮರೆಮ್ಮ ತಿಪ್ಪಣ್ಣ ಪೂಜಾರಿ ಪಸ್ಪೂಲ್ ಅವರ ಪುತ್ರ ವೆಂಕಟೇಶ ಮತ್ತು ಕನ್ಯಾಕೋಳೂರು ಗ್ರಾಮದ ಜಯಶ್ರೀ ಪೂಜಪ್ಪ ಅವಡಿಯವರ ಪುತ್ರಿ ಚಾಮುಂಡೇಶ್ವರಿ ವಿನೂತನ ರೀತಿ ಮದುವೆಯಾದರು.

ಬಣ್ಣದ ಹೂಗಳಿಂದ ಅಲಂಕೃತ ಬಟ್ಟೆ ಪರದೆಯ ಮೇಲೆ ದಂಪತಿ ಹೆಸರಿನ ಜೊತೆ ‘ಪರಿಸರ ಉಳಿಸಿ, ಪರಿಸರ ಬೆಳೆಸಿ’ ಎಂಬ ಸಾಲುಗಳಿದ್ದವು. ಮದುವೆಗೆ ಬಂದವರಿಗೆ ಕರಿಬೇವು, ಮಾವು, ಸೀತಾಫಲ, ಬೇವು, ಲಿಂಬೆ, ಅಶೋಕ, ನೇರಳೆ ಮುಂತಾದ ಸಸಿಗಳನ್ನು ನೀಡಲಾಯಿತು.

ADVERTISEMENT

‘ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕನಾದ ನನಗೆ ಗಿಡ, ಮರಗಳೆಂದರೆ ಪ್ರೀತಿ. ನಮ್ಮೂರಿನ ಪಕ್ಕದ ಹತ್ತಿಕುಣಿ ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ವಿವಿಧ ಜಾತಿಯ1 ಸಾವಿರ ಗಿಡಗಳನ್ನು ಖರೀದಿಸಿ, ಅತಿಥಿಗಳಿಗೆ ವಿತರಿಸಿದೆ’ ಎಂದು ವರ ವೆಂಕಟೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.