ADVERTISEMENT

ಗುರುಮಠಕಲ್‌: ಕಳ್ಳಭಟ್ಟಿ ಪರಿಶೀಲನೆ ವೇಳೆ ಅಬಕಾರಿ ಪೊಲೀಸ್‌,ಗೃಹರಕ್ಷಕನ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 6:43 IST
Last Updated 18 ಜೂನ್ 2025, 6:43 IST
<div class="paragraphs"><p>(ಎಡದಿಂದ) ಪರಶುರಾಮ, ಭೀಮರಾಯ</p></div>

(ಎಡದಿಂದ) ಪರಶುರಾಮ, ಭೀಮರಾಯ

   

ಗುರುಮಠಕಲ್‌ (ಯಾದಗಿರಿ ಜಿಲ್ಲೆ): ಕಳ್ಳಭಟ್ಟಿ ತಯಾರಿಯ ಪರಿಶೀಲನೆ ವೇಳೆ ಅಬಕಾರಿ ಇಲಾಖೆಯ ಪೊಲೀಸ್‌ ಮತ್ತು ಗೃಹರಕ್ಷಕನನ್ನು ಥಳಿಸಿದ ಘಟನೆಗೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಪಸಪುಲ್‌ ತಾಂಡಾದ ಶಂಕ್ರಿಬಾಯಿ, ನಿಂಗಪ್ಪ, ಮೋಹನ, ಸೋಮ್ಲಾ, ಶಾಂತಿಬಾಯಿ ಮತ್ತು ಬೀಚಿಬಾಯಿ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಘಟನೆ ವಿವರ:

ಯಾದಗಿರಿ ಅಬಕಾರಿ ಇನ್ಸ್‌ಪೆಕ್ಟರ್ ಕಚೇರಿಯ ಅಬಕಾರಿ ಪೊಲೀಸ್‌ ಪರಶುರಾಮ ರಾಠೋಡ ಮತ್ತು ಗೃಹರಕ್ಷಕ ಭೀಮರಾಯ ಕಬ್ಬೇರ ಆಶಾಪುರ ಅವರು ಮಂಗಳವಾರ ಮಾರ್ಗ-4ರಲ್ಲಿ ಗಸ್ತು ನಡೆಸುತ್ತಿದ್ದರು.

ಪಸಪುಲ್‌ ತಾಂಡಾದ ಶಂಕ್ರಿಬಾಯಿ ನಿಂಗಪ್ಪ ಅವರ ಮನೆಯಲ್ಲಿ ಕಳ್ಳಬಟ್ಟಿ ಸರಾಯಿ ತಯಾರಿಸುವ ಕುರಿತು ಅಬಕಾರಿ ಇನ್ಸ್‌ಪೆಕ್ಟರ್ ಅವರಿಗೆ ಮಾಹಿತಿ ಬಂದಿದ್ದು, ಗಸ್ತಿನಲ್ಲಿದ್ದ ಅಬಕಾರಿ ಪೊಲೀಸ್‌ ಪರಶುರಾಮ ಅವರಿಗೆ ಪರಿಶೀಲಿಸಲು ತಿಳಿಸಿದ್ದರು.

'ಕಳ್ಳಬಟ್ಟಿ ಸರಾಯಿ ತಯಾರಿಕೆ ಕುರಿತು ಪರಿಶೀಲನೆಗೆ ಶಂಕ್ರಿಬಾಯಿ ಅವರ ಮನೆಗೆ ತೆರಳಿದ್ದರು.

ಪರಿಶೀಲನೆಗೆ ಬಂದಿರುವುದು ತಿಳಿದ ಶಂಕ್ರಿಬಾಯಿ ಅವಾಚ್ಯವಾಗಿ ‌ನಿಂದಿಸಿದ್ದು, ಉಳಿದ ಆರೋಪಿಗಳನ್ನು ಜಮಾಯಿಸಿದ್ದಾರೆ. ಪರಶುರಾಮ ರಾಠೋಡ ಅವರನ್ನು ಕೋಲಿನಿಂದ ಹೊಡೆಯುತ್ತಿದ್ದಾಗ, ಬಿಡಿಸಲು ಬಂದ ಗೃಹರಕ್ಷಕ ಭೀಮರಾಯ ಅವರನ್ನೂ ಹೊಡೆದಿದ್ದಾರೆ' ಎನ್ನುವ ದೂರಿನಂತೆ ಪ್ರಕರಣ ದಾಖಲಿಸಿರುವುದಾಗಿ ಪೊಲೀಸ್‌ ಇಲಾಖೆ ಮಾಹಿತಿ ನೀಡಿದೆ.

ಜಗಳದ ವೇಳೆ ವಿಡಿಯೋ ಚಿತ್ರೀಕರಿಸುವಾಗ ಆರೋಪಿಗಳು ಮೊಬೈಲ್‌ನ್ನು ಮತ್ತು ಸರ್ಕಾರಿ ಬೈಕ್ ವಾಹನವನ್ನು ಕಸಿದುಕೊಂಡಿದ್ದಾರೆ ಎಂದು ಅಬಕಾರಿ ಪೊಲೀಸ್‌ ಪರಶುರಾಮ ದೂರಿನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.