ADVERTISEMENT

ರೈತ ಮುಖಂಡರ ಮೇಲೆ ಹಲ್ಲೆ: ಪ್ರತಿಭಟನೆ

ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹ, ಹೋರಾಟದ ಎಚ್ಚರಿಕೆ ನೀಡಿದ ಸಂಘಟನೆಗಳು

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 4:10 IST
Last Updated 1 ಜೂನ್ 2022, 4:10 IST
ರೈತ ಮುಖಂಡ ರಾಕೇಶ ಟಿಕಾಯತ್ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಶಹಾಪುರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು
ರೈತ ಮುಖಂಡ ರಾಕೇಶ ಟಿಕಾಯತ್ ಅವರ ಮೇಲೆ ನಡೆದ ಹಲ್ಲೆ ಖಂಡಿಸಿ ಶಹಾಪುರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಲಾಯಿತು   

ಶಹಾಪುರ: ರೈತ ಹಾಗೂ ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕಲು ಕೆಲಪಟ್ಟಭದ್ರ ಹಿತಾಸಕ್ತಿಗಳ ದುಷ್ಟಪಡೆಗಳು ವ್ಯವಸ್ಥಿತವಾಗಿ ರೈತ ಮುಖಂಡರ ಮೇಲೆ ದಾಳಿ ಮಾಡಿ ನೈತಿಕ ಶಕ್ತಿಯನ್ನು ಕುಂದಿಸುವ ಪಿತೂರಿ ನಡೆಸಿವೆ. ರೈತ ಮುಖಂಡ ರಾಕೇಶ ಟಿಕಾಯತ್ ಅವರ ಮೇಲೆ ಹಲ್ಲೆ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಆಗಿದೆ ಎಂದು ಆರೋಪಿಸಿ ಮಂಗಳವಾರ ವಿವಿಧ ರೈತ ಸಂಘಟನೆಗಳ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಸರ್ಕಾರ ಪತ್ರಿಕಾಗೋಷ್ಠಿಯನ್ನು ನಡೆಸದಂತೆ ದಬ್ಬಾಳಕೆ ನಡೆಸುತ್ತಿದೆ. ನ್ಯಾಯಬದ್ದ ಹಕ್ಕುಗಳನ್ನು ಹೋರಾಟದ ಮೂಲಕ ಪಡೆಯುವದಕ್ಕೆ ಅಡ್ಡಗಾಲು ಹಾಕುತ್ತಿದೆ. ಇಂತಹ ಗೊಡ್ಡು ಬೆದರಿಕೆಗೆ ರೈತ ಮುಖಂಡರು ಹೆದರುವ ಅಗತ್ಯವಿಲ್ಲ. ಅವೆಲ್ಲವನ್ನು ಮೆಟ್ಟಿನಿಂತು ನ್ಯಾಯ ಪಡೆಯುತ್ತೇವೆ ಎಂದು ರೈತ ಮುಖಂಡ ಚೆನ್ನಪ್ಪ ಆನೇಗುಂದಿ ತಿಳಿಸಿದರು.

ಶರಣು ಮಂದರವಾಡ, ಎಸ್.ಎಮ್ ಸಾಗರ, ಶರಣುಗೌಡ ಗೂಗಲ್, ಜೈಲಾಲ್ ತೋಟದಮನಿ, ಶಿವರಾಯ ಯಳವಾರ, ಮಲ್ಲಯ್ಯ ಪೊಲಂಪಲ್ಲಿ ಇದ್ದರು.

ADVERTISEMENT

ಎಸ್‌ಡಿಪಿಐ ಪಕ್ಷ: ನಗರದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಎಸ್‌ಡಿಪಿಐ ಪಕ್ಷದ ಮುಖಂಡರು ಪ್ರತಿಭಟನೆ ನಡೆಯಿಸಿ ರೈತ ಮುಖಂಡ ರಾಕೇಶ ಟಿಕಾಯಿತ್ ಅವರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಂದೆನವಜ್ ಗೋಗಿ, ಸಯ್ಯದ ಇಸಾಕ್ ಹುಸೇನಿ ಖಾಲಿದ ಅಹ್ಮದ, ವಿಠಲ ವಗ್ಗಿ, ಸಾಹಿತಿ ಶಿವಣ್ಣ ಇಜೇರಿ, ವಿನೋದ ರಾಠೋಡ, ಕೆ.ಎಂ.ಪಾಶ, ಬಿಲಾಲ್ ಖರೇಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.