ADVERTISEMENT

136 ಬಸ್‌ಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆ

ಜಿಲ್ಲೆಯಲ್ಲಿವೆ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ 359 ಬಸ್‌ಗಳು

ಬಿ.ಜಿ.ಪ್ರವೀಣಕುಮಾರ
Published 9 ಜನವರಿ 2020, 10:57 IST
Last Updated 9 ಜನವರಿ 2020, 10:57 IST
ಯಾದಗಿರಿಯಿಂದ ಬೆಂಗಳೂರಿಗೆ ತೆರಳುವ ಸಾರಿಗೆ ಬಸ್‌ಗೆ ಫಾಸ್ಟ್‌ಟ್ಯಾಗ್‌ ಆಳವಡಿಸಿರುವುದು
ಯಾದಗಿರಿಯಿಂದ ಬೆಂಗಳೂರಿಗೆ ತೆರಳುವ ಸಾರಿಗೆ ಬಸ್‌ಗೆ ಫಾಸ್ಟ್‌ಟ್ಯಾಗ್‌ ಆಳವಡಿಸಿರುವುದು   

ಯಾದಗಿರಿ: ಜಿಲ್ಲೆಯಿಂದ ಹೊರ ರಾಜ್ಯ ಮತ್ತು ಹೆದ್ದಾರಿಗಳಲ್ಲಿ ಸಂಚರಿಸುವ ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ 136 ಬಸ್‌ಗಳಿಗೆ ಫಾಸ್ಟ್‌ಟ್ಯಾಗ್‌ ಆಳವಡಿಸಲಾಗಿದೆ.

‌ಜಿಲ್ಲೆಯಲ್ಲಿ ಸಂಸ್ಥೆಯ ವಿವಿಧ ಬಗೆಯ ಒಟ್ಟು 359 ಬಸ್‌ಗಳಿವೆ. ಮುಂಬೈ, ಹೈದರಾಬಾದ್‌, ಪುನಾ, ಬೆಂಗಳೂರಿಗೆ ದಿನನಿತ್ಯ ಬಸ್‌ಗಳು ಸಂಚರಿಸುತ್ತವೆ.

ಬೆಂಗಳೂರಿಗೆ 10 ಬಸ್‌ಗಳು ಸಂಚರಿಸುತ್ತಿವೆ. ಇವುಗಳಲ್ಲಿ 2 ನಾನ್‌ ಎಸಿ, 2 ರಾಜಹಂಸ ಮತ್ತು ಎಕ್ಸ್‌ಪ್ರೆಸ್‌ ಬಸ್‌ಗಳಿಗೆ ಫಾಸ್ಟ್‌ಟ್ಯಾಗ್‌ ಆಳವಡಿಸಲಾಗಿದೆ. ಈ ಬಸ್‌ಗಳು ಟೋಲ್‌ನಲ್ಲಿ ಕ್ಯೂ ನಿಲ್ಲದೆ ಒಡಾಟ ನಡೆಸುತ್ತವೆ ಎನ್ನುತ್ತಾರೆ ಸಂಸ್ಥೆಯ ವಿಭಾಗೀಯ ನಿಯಂತ್ರಣ ಅಧಿಕಾರಿ ಸಂತೋಷ ಗೋಗೇರಿ.

ADVERTISEMENT

ಜಿಲ್ಲೆಯಿಂದ ಹೊರ ರಾಜ್ಯಕ್ಕೆ 6 ಮುಂಬೈ, 2 ಪೂನಾ, ಹೈದರಾಬಾದ್‌ಗೆ12 ಬಸ್‌ಗಳು ತೆರಳುತ್ತವೆ. ಎರಡು ಸುರಪುರ, ಶಹಾಪುರ 2, ಗುರುಮಠಕಲ್‌ನಿಂದ 2 ಬಸ್‌ಗಳು ಮುಂಬೈಗೆ ತೆರಳುತ್ತವೆ.

ಏನಿದು ಫಾಸ್ಟ್‌ಟ್ಯಾಗ್

ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಂಚರಿಸುವಾಗ ಟೋಲ್‌ ನೀಡಲು ಡಿಜಿಟಲ್ ವ್ಯವಸ್ಥೆ ಇದು. ಇದನ್ನು ಅಳವಡಿಸಿದರೆ ಟೋಲ್‌ನಲ್ಲಿ ಕ್ಯೂ ನಿಂತು ಹಣ ನೀಡಬೇಕಿಲ್ಲ. ಬದಲಾಗಿ ಫಾಸ್ಟ್‌ಟ್ಯಾಗ್‌ ಸ್ಕ್ಯಾನಿಂಗ್ ಮೂಲಕ ಹಣ ಪಾವತಿಸುವುದಾಗಿದೆ.

ವಾಹನದ ಗಾಜಿನ ಮೇಲೆ ಅಥವಾ ಮುಂಭಾಗದಲ್ಲಿ ಫಾಸ್ಟ್‌ಟ್ಯಾಗ್‌ ಸ್ಟಿಕ್ಕರ್ ( ಕ್ಯುಆರ್ ಕೋಡ್ ಮಾದರಿಯ ಸ್ಟಿಕ್ಕರ್) ಅಂಟಿಸಲಾಗುತ್ತದೆ. ಟೋಲ್‌ ಬಳಿ ಪ್ರವೇಶಿಸುತ್ತಿದ್ದಂತೆಯೇ ಸ್ವಯಂ ಚಾಲಿತವಾಗಿ ಖಾತೆಯಿಂದ ಟೋಲ್ ಶುಲ್ಕ ಕಡಿತಆಗಲಿದೆ. ಇದರಿಂದ ಕ್ಯೂ ನಿಲ್ಲುವಂತ ಪರಿಸ್ಥಿತಿ ತಪ್ಪುತ್ತದೆ. ಸರಿಯಾದ ಸಮಯಕ್ಕೆ ವಾಹನಗಳು ತಲುಪಲು ಸಾಧ್ಯವಾಗುತ್ತವೆ.

ವಾಹನಗಳ ಸುಗಮ ಕಾರ್ಯ ನಿರ್ವಹಣೆಗೆ ಸಹಾಯವಾಗುವ ನಿಟ್ಟಿನಲ್ಲಿ ಹಾಗೂ ಹಣವಿಲ್ಲದ ಪಾವತಿಗಳನ್ನು ಉತ್ತೇಜಿಸುವುದು ಮತ್ತು ಸಂಚಾರ ದಟ್ಟಣೆಯನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ. ಇನ್ನು ಫಾಸ್ಟ್‌ಟ್ಯಾಗ್‌ ಬಳಕೆದಾರರಿಗೆ ಶೇ 2.5 ಕ್ಯಾಶ್‌ ಬ್ಯಾಕ್‌ ಕೂಡ ನೀಡಲಾಗುತ್ತಿದೆ. ಸಾರಿಗೆ ಸಂಸ್ಥೆಗೆ ಇದರಿಂದ ಅನುಕೂಲವಾಗಿದೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.