ADVERTISEMENT

ಪೌಷ್ಠಿಕತೆ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:39 IST
Last Updated 19 ಡಿಸೆಂಬರ್ 2019, 10:39 IST
ಯರಗೋಳ ಸಮೀಪದ ಠಾಣಗುಂದಿ ಗ್ರಾಮದಲ್ಲಿ ಪೌಷ್ಟಿಕ ಆಹಾರ ಶಿಬಿರ ಜರುಗಿತು
ಯರಗೋಳ ಸಮೀಪದ ಠಾಣಗುಂದಿ ಗ್ರಾಮದಲ್ಲಿ ಪೌಷ್ಟಿಕ ಆಹಾರ ಶಿಬಿರ ಜರುಗಿತು   

ಯರಗೋಳ: ಮಕ್ಕಳಲ್ಲಿ ಪೌಷ್ಟಿಕತೆ ಕೊರತೆಯಿಂದ ಹಲವು ರೋಗಗಳ ಬರುತ್ತವೆ. ತಾಯಂದಿರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕತೆಯಿದೆ ಎಂದು ಕಲಿಕಾ ಸಂಸ್ಥೆಯ ಪೌಷ್ಠಿಕ ಸಹಾಯಕ ಕಾಯ೯ಕ್ರಮ ಅಧಿಕಾರಿ ತಾರಾ ಸಿಂಗ್ ಜಾಧವ್ ಹೇಳಿದರು.

ಯರಗೋಳ ಸಮೀಪದ ಠಾಣಗುಂದಿ ಗ್ರಾಮದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ಸ್‌ ವತಿಯಿಂದ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಲಿಕೆ ಸಂಸ್ಥೆಯ ಪೌಷ್ಟಿಕ ಕಾರ್ಯಕ್ರಮ ಸಂಯೋಜಕ ಶಿವರಾಜನಾಯಕ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪೌಷ್ಟಿಕ ಆಹಾರ ಅವಶ್ಯಕವಿದೆ ಎಂದರು. ಕಲಿಕೆ ಸಂಸ್ಥೆಯ ಮೂರ್ತಿ, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT