ವಡಗೇರಾ: ಕಳೆದ 7 ವರ್ಷದಿಂದ ರಾಷ್ಟ ಲಾಂಛನ ಪಟ್ಟಣದ ಹನುಮಾನ ದೇವಸ್ಥಾನದ ಆವರಣದಲ್ಲಿ ಇದೆ. ಆದರೆ ಅದನ್ನು ಸಂರಕ್ಷಿಸುವ ಇಲ್ಲವೇ ಸ್ಥಳಾಂತರಿಸುವ ಕಾರ್ಯ ಯಾರೂ ಮಾಡುತ್ತಿಲ್ಲ ಎಂಬ ಕೂಗು ಸಾರ್ವಜನಿಕರಿಂದ ಕೇಳಿಬಂದಿದೆ.
ವಡಗೇರಾ ತಾಲ್ಲೂಕು ಕೇಂದ್ರವಾಗುವ ಮೊದಲು ಲೋಕೋಪಯೋಗಿ ಇಲಾಖೆಯವರು ಪಟ್ಟಣದ ಅಗಸಿ (ದ್ವಾರ ಬಾಗಿಲು) ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬೃಹದಾಕಾರದ ಕಮಾನನ್ನು ನಿರ್ಮಾಣ ಮಾಡಿ ಅದರ ಮೇಲೆ ರಾಷ್ಟ್ರ ಲಾಂಛನವನ್ನು ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಕಮಾನಿನ ಮೇಲೆ ರಾಷ್ಟ ಲಾಂಛನ ಪಟ್ಟಣದ ಕಿರೀಟದಂತೆ ಕಂಗೊಳಿಸುತಿತ್ತು.
ಪಟ್ಟಣದಲ್ಲಿ ಕಿರಿದಾದ ರಸ್ತೆಗಳನ್ನು ಅಗಲೀಕರಣ ಮಾಡಲು 2017ರ ಮೇನಲ್ಲಿ ಲೋಕೋಪಯೋಗಿ ಇಲಾಖೆಯವರು ರಸ್ತೆ ಬದಿಯಲ್ಲಿ ಇದ್ದ ಮನೆಗಳು ಹಾಗೂ ಅಂಗಡಿಗಳನ್ನು ತೆರವುಗೊಳಿಸಲು ಕ್ರಮಗಳನ್ನು ಕೈಗೊಂಡರು. ಆ ಸಮಯದಲ್ಲಿ ಕಮಾನಿನ ಮೇಲೆ ಇದ್ದ ರಾಷ್ಟ್ರ ಲಾಂಛವನ್ನು ಸಹ ತೆರವುಗೊಳಿಸಿ ಪಕ್ಕದಲ್ಲಿಯೇ ಇದ್ದ ಶ್ರೀ ಆಂಜನೇಯ ದೇವಸ್ಥಾನದ ಕಟ್ಟೆಯ ಮೇಲೆ ಇಡಲಾಯಿತು.
ಅಂದಿನಿಂದ ಇಂದಿನವರೆಗೂ ಅಂದರೆ ಕಳೆದ 7 ವರ್ಷಗಳಿಂದ ರಾಷ್ಟ ಲಾಂಛನ ಮಳೆ, ಗಾಳಿ, ಬಿಸಿಲಿಗೆ ಅನಾಥವಾಗಿ ಹನುಮಾನ ಕಟ್ಟೆಯ ಮೇಲೆ ಇದೆ.
ಭಾರತದ ಪ್ರತಿಯೊಬ್ಬ ಪ್ರಜೆ ರಾಷ್ಟಗೀತೆ, ರಾಷ್ಟ್ರಧ್ವಜ, ರಾಷ್ಟಲಾಂಛನಕ್ಕೆ ಗೌರವ ಕೊಡಬೇಕು. ಆದರೆ ವಡಗೇರಾ ಪಟ್ಟಣದಲ್ಲಿ ಇರುವ ಲಾಂಛನದ ಕುರಿತು ಯಾವ ಅಧಿಕಾರಿಯೂ ಕೇಳುತ್ತಿಲ್ಲ. ಅದಕ್ಕಾಗಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಅದನ್ನು ಅಲ್ಲಿಂದ ತೆರವುಗೊಳಿಸಿ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಪಟ್ಟಣ ವಾಸಿಗಳ ಆಗ್ರಹವಾಗಿದೆ.
ಬಾಕ್ಸ್ ರಾಷ್ಟ್ರಲಾಂಛನವನ್ನುಪ್ರಜಾಪ್ರಭುತ್ವದ ದಿನ ಆಚರಣೆಯ ನಂತರ ತಾ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸ್ಥಳಾಂತರಿಸುವುದರ ಜತೆಗೆ ಸಂರಕ್ಷಿಸಲಾಗುವದುಶ್ರೀನಿವಾಸ ಚಾಪೇಲ್ ತಹಶೀಲ್ದಾರ್ ವಡಗೇರಾ
ರಾಷ್ಟ್ರಲಾಂಛನವನ್ನು ಕೂಡಲೇ ಅಧಿಕಾರಿಗಳು ಅದನ್ನು ಅಲ್ಲಿಂದ ತೆರವುಗೊಳಿಸಿ ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳಬೇಕು.ಶರಣು ಕುರಿ ಗ್ರಾ.ಪಂ ಸದಸ್ಯ ವಡಗೇರಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.