ADVERTISEMENT

ಭೀಮಾ ನದಿ ಬಳಿ ಈಜಲು ತೆರಳಿದ್ದ ಯುವಕರು ನೀರು ಪಾಲು

ನಾಲ್ವರ ಯುವಕರ ಮೃತದೇಹ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 6:22 IST
Last Updated 7 ಸೆಪ್ಟೆಂಬರ್ 2020, 6:22 IST
ಯುವಕರ ಮೃತದೇಹ
ಯುವಕರ ಮೃತದೇಹ    

ಯಾದಗಿರಿ: ನಗರ ಹೊರವಲಯದ ಭೀಮಾ ನದಿಯಲ್ಲಿ ಭಾನುವಾರ ಈಜಲು ತೆರಳಿದ್ದ ನಾಲ್ವರ ಯುವಕರ ಮೃತದೇಹ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಎನ್ ಡಿಆರ್ ಎಫ್ ತಂಡ, ರಾಷ್ಟ್ರೀಯ ಗೃಹ ರಕ್ಷಕ ದಳ, ಸ್ಥಳೀಯ ಮೀನುಗಾರರು ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ಅಜೀಜ್ ಕಾಲೊನಿಯ ಅಮನ್ (16), ಅಯಾನ್ (16), ರೆಹಮಾನ್ (16),ಕಲಬುರ್ಗಿಯ ರೆಹಮಾನ್ (16) ಮೃತದೇಹ ಪತ್ತೆಯಾಗಿದೆ.

ಸ್ಥಳೀಯ ಮೀನುಗಾರರಾದ ತಾಯಪ್ಪ ತಾಂಡೂರಕರ, ಅಂಬರೇಶ್ ತಾಂಡೂರಕರ, ಮಲ್ಲಪ್ಪ ಜಾಲಗಾರ, ಮಲ್ಲಪ್ಪ ಕೋಟಿಮನಿ, ಕೃಷ್ಣಪ್ಪ, ಶುಭಾಷ ಜಾಲಗಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ADVERTISEMENT

ಭಾನುವಾರ ಕತ್ತಲಾಗುವರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಮತ್ತೆ ಸೋಮವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಲಾಗಿ ಯುವಕರ ಮೃತದೇಹಗಳು ಪತ್ತೆಯಾಗಿವೆ.

'ಜಿಲ್ಲಾಧಿಕಾರಿ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿ ಗುರುಸುಣಗಿ ಬ್ರಿಡ್ಜ್ ಬಳಿ ಎಚ್ಚರಿಕೆ ಸಂದೇಶದ ನಾಮಫಲಕ ಅಳವಡಿಸಲಾಗುವುದು. ಸುತ್ತಮತ್ತಲು ತಂತಿ ಬೇಲಿ ಅಳವಡಿಸಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.