ADVERTISEMENT

ಕೆಂಭಾವಿ: ಆರೋಗ್ಯ ಉಚಿತ ತಪಾಸಣಾ ಶಿಬಿರದಿಂದ ಆರ್ಥಿಕ ಉಳಿತಾಯ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 6:29 IST
Last Updated 31 ಆಗಸ್ಟ್ 2025, 6:29 IST
ಕೆಂಭಾವಿ ಪಟ್ಟಣದ ಶ್ರೀ ಸತ್ಯಪ್ರಮೋದ ಯುವ ಸೇನೆ ವತಿಯಿಂದ ದ್ವಿತೀಯ ವರ್ಷದ  ಗಣೇಶೋತ್ಸವದ ಅಂಗವಾಗಿ ಶನಿವಾರ ಉತ್ತರಾದಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ ಯಲಗೋಡ ಉದ್ಘಾಟಿಸಿದರು
ಕೆಂಭಾವಿ ಪಟ್ಟಣದ ಶ್ರೀ ಸತ್ಯಪ್ರಮೋದ ಯುವ ಸೇನೆ ವತಿಯಿಂದ ದ್ವಿತೀಯ ವರ್ಷದ  ಗಣೇಶೋತ್ಸವದ ಅಂಗವಾಗಿ ಶನಿವಾರ ಉತ್ತರಾದಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ ಯಲಗೋಡ ಉದ್ಘಾಟಿಸಿದರು   

ಕೆಂಭಾವಿ: ‘ಗ್ರಾಮೀಣ ಭಾಗಗಳಲ್ಲಿ ಆಯೋಜಿಸುವ ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳಿಂದ ಜನರಿಗೆ ಅನುಕೂಲವಾಗಲಿದ್ದು, ಆರ್ಥಿಕ ಉಳಿತಾಯವಾಗಲಿದೆ’ ಎಂದು ಕಲಬುರಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ ಹುಣಸಗಿ ಹೇಳಿದರು.

ಶ್ರೀ ಸತ್ಯಪ್ರಮೋದ ಯುವಸೇನೆ ಹಾಗೂ ಕಲಬುರಗಿ ಸನ್‍ರೈಸ್‌ ಆಸ್ಪತ್ರೆ ಸಹಯೋಗದಲ್ಲಿ ದ್ವಿತೀಯ ವರ್ಷದ ಗಣೇಶೋತ್ಸವದ ಅಂಗವಾಗಿ ಶನಿವಾರ ಉತ್ತರಾಧಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿಪ್ರ ಸಮಾಜದವರು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಎಲ್ಲ ಜನರ ಹಿತ ಬಯಸುವವರಾಗಿದ್ದಾರೆ. ಇಂತಹ ಶಿಬಿರಗಳ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ, ವೈದ್ಯಾಧಿಕಾರಿ ಗಿರೀಶ ಕುಲಕರ್ಣಿ ಮಾತನಾಡಿದರು. ಪುರಸಭೆ ಅಧ್ಯಕ್ಷ ರೆಹಮಾನ ಪಟೇಲ ಯಲಗೋಡ ಕಾರ್ಯಕ್ರಮ ಉದ್ಘಾಟಿಸಿದರು. ಆಶ್ರಯ ಕಮಿಟಿ ಅಧ್ಯಕ್ಷ ಶರಣಬಸು ಕಾಕಾ ಡಿಗ್ಗಾವಿ, ಸಂಜೀವರಾವ ಕುಲಕರ್ಣಿ, ಪುರಸಭೆ ಸದಸ್ಯ ಸುಧಾಕರ ಡಿಗ್ಗಾವಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಂಘದ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ದೇಶಪಾಂಡೆ, ಪುಟ್ಟರಾಜ ಹಿರೇಮಠ ಉಪಸ್ಥಿತರಿದ್ದರು.

ಪ್ರಮೋದ ಕುಲಕರ್ಣಿ ನಿರೂಪಿಸಿದರು. ವಾದಿರಾಜ ಕುಲಕರ್ಣಿ ಸ್ವಾಗತಿಸಿದರು. ಗುಂಡಭಟ್ಟ ಜೋಷಿ ವಂದಿಸಿದರು. ಶಿಬಿರದಲ್ಲಿ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಅಹಮದ್ ಫಾರಾಜ್ ಪಟೇಲ್, ಗುತ್ತಿ ಬಸವೇಶ್ವರ ಮಕ್ಕಳ ಆಸ್ಪತ್ರೆ ಮಕ್ಕಳ ತಜ್ಞ ಡಾ.ಪ್ರಕಾಶ ಯಾಳಗಿ, ಸ್ತ್ರೀ ರೋಗ ತಜ್ಞೆ ಡಾ.ಶಬನಮ್, ಕೀಲು ರೋಗ ತ ಜ್ಞ ಡಾ.ಅಂಬುರೆ, ದಂತವೈದ್ಯ ಡಾ.ಸಂಗನಗೌಡ ಅಲ್ದಾಳ 200ಕ್ಕೂ ಹೆಚ್ಚು ಜನರಿಗೆ ತಪಾಸಣೆ ನಡೆಸಿ ಉಚಿತ ಔಷಧಿ ವಿತರಿಸಿದರು.

ಕೆಂಭಾವಿ ಪಟ್ಟಣದ ಶ್ರೀ ಸತ್ಯಪ್ರಮೋದ ಯುವ ಸೇನೆ ವತಿಯಿಂದ ದ್ವಿತೀಯ ವರ್ಷದ ಗಣೇಶೋತ್ಸವದ ಅಂಗವಾಗಿ ಶನಿವಾರ ಉತ್ತರಾದಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆ ನಡೆಸುತ್ತಿರುವ ವೈದ್ಯರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.