ADVERTISEMENT

ಯಾದಗಿರಿ: 27ಕ್ಕೆ ಗ್ರಾ.ಪಂಗಳ ಉಪ ಚುನಾವಣೆ

ತೆರವಾದ 11 ಸ್ಥಾನಗಳಿಗೆ ಚುನಾವಣಾ ದಿನಾಂಕ ನಿಗದಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 5:17 IST
Last Updated 16 ಡಿಸೆಂಬರ್ 2021, 5:17 IST

ಯಾದಗಿರಿ: ‘ಜಿಲ್ಲೆಯ ಯಾದಗಿರಿ, ಗುರುಮಠಕಲ್, ಶಹಾಪುರ, ವಡಗೇರಾ, ಸುರಪುರ ಹಾಗೂ ಹುಣಸಗಿ ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ರಾಜೀನಾಮೆ, ನಿಧನ ಹಾಗೂ ಇತರ ಕಾರಣಗಳಿಗೆ ತೆರವಾಗಿರುವ ಗ್ರಾಮ ಪಂಚಾಯಿತಿ ಗಳ ಸದಸ್ಯ ಸ್ಥಾನಗಳನ್ನು ತುಂಬಲು ಉಪ ಚುನಾವಣೆ ನಡೆಸಬೇಕಾಗಿದೆ. ಆದ್ದರಿಂದ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು–1993 ರ 12ನೇ ನಿಯಮಕ್ಕನುಸಾರವಾಗಿ ಚುನಾವಣೆಗೆ ಸಂಬಂಧಿಸಿದ ವೇಳಾಪಟ್ಟಿ ತಯಾರಿಸಲಾಗಿದೆ. ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಡಿ.17ಕ್ಕೆ ನಾಮತ್ರಗಳನ್ನು ಸಲ್ಲಿಸಲು ಕೊನೆಯ ದಿನ, 18 ನಾಮಪತ್ರ ಪರಿಶೀಲಿಸುವ ದಿನ. 20 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ, ಮತದಾನ ಅವಶ್ಯವಿದ್ದರೆ ಡಿ27ರಂದು ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ) ಮರು ಮತದಾನ ಇದ್ದಲ್ಲಿ ಡಿ.29ರಂದು ಚುನಾವಣೆ ನಡೆಸಬೇಕು. ಡಿ.30ರಂದು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಅವರು ತಿಳಿಸಿದರು.

ADVERTISEMENT

ಗುರುಮಠಕಲ್ ತಾಲ್ಲೂಕಿನಲ್ಲಿ ಚಂಡ್ರಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಶ್ವಾರ (ಸಾಮಾನ್ಯ), ಪುಟಪಾಕ್ ಗ್ರಾಮ ಪಂಚಾಯಿತಿಯ ಪುಟಪಾಕ್ (ಸಾಮಾನ್ಯ), ಯಾದಗಿರಿ ತಾಲ್ಲೂಕಿನಲ್ಲಿ ಅರಿಕೇರಾ (ಬಿ) ಗ್ರಾಮ ಪಂಚಾಯಿತಿ ಸಿದ್ದಾರ್ಥನಗರ (ಅನುಸೂಚಿತ ಜಾತಿ), ಅಲ್ಲಿಪುರ ಗ್ರಾಮ ಪಂಚಾಯಿತಿಯ ಕಂಚಗಾರಹಳ್ಳಿ ತಾಂಡಾ (ಅನುಸೂಚಿತ ಜಾತಿ ಮಹಿಳೆ), ಬಂದಳ್ಳಿ ಗ್ರಾಮ ಪಂಚಾಯಿತಿಯ ಬಂದಳ್ಳಿ (ಸಾಮಾನ್ಯ) ಅಭ್ಯರ್ಥಿಗೆ ಮೀಸಲಾಗಿದೆ ಎಂದು ತಿಳಿಸಿದರು.

ಶಹಾಪುರ ತಾಲ್ಲೂಕಿನ ಕನ್ಯಾಕೊಳ್ಳೂರು ಗ್ರಾಮ ಪಂಚಾಯಿತಿಯ ಕನ್ಯಾಕೊಳ್ಳೂರ (ಅನುಸೂಚಿತ ಜಾತಿ), ವಡಗೇರಾ ತಾಲ್ಲೂಕಿನಲ್ಲಿ ಕುರಕುಂದಾ ಗ್ರಾಮ ಪಂಚಾಯಿತಿಯ ಕುರಕುಂದಾ (ಹಿಂದುಳಿದ ವರ್ಗ ಅ ಮಹಿಳೆ), ಸುರಪುರ ತಾಲ್ಲೂಕಿನ ದೇವಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಹಳ್ಳಿ (ಪರಿಶಿಷ್ಟ ಪಂಗಡ ಮಹಿಳೆ), ಕರಡಕಲ್ ಗ್ರಾಮ ಪಂಚಾಯಿತಿಯ ಕರಡಕಲ್ (ಪರಿಶಿಷ್ಟ ಪಂಗಡ), ಹುಣಸಗಿ ತಾಲ್ಲೂಕಿನ ಜೋಗುಂಡಭಾವಿ ಗ್ರಾಮ ಪಂಚಾಯಿತಿಯ ಅಮ್ಮಾಪುರ ( ಎಸ್.ಕೆ), (ಅನುಸೂಚಿತ ಜಾತಿ), ಅಗ್ನಿ ಗ್ರಾಮ ಪಂಚಾಯಿತಿಯ ಕರಿಭಾವಿ (ಸಾಮಾನ್ಯ) ಜಾತಿಗೆ ಮೀಸಲಾಗಿದ್ದು, ಒಟ್ಟು 11 ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಈ ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ಡಿಸೆಂಬರ್ 13 ರಿಂದ ಡಿ.30 ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.