ADVERTISEMENT

ಶಹಾಪುರ: ವನದುರ್ಗದಲ್ಲಿ ಮತದಾನ ಮತ್ತೆ ಆರಂಭ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 8:18 IST
Last Updated 22 ಡಿಸೆಂಬರ್ 2020, 8:18 IST
ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮ ಪಂಚಾಯಿತಿ ಮತಗಟ್ಟೆ ಸಂಖ್ಯೆ 45ರಲ್ಲಿ ವೃದ್ಧೆಯೊಬ್ಬರು ಮತ ಚಲಾಯಿಸಿ ಮತಕೇಂದ್ರದಿಂದ ಹೊರಬರುತ್ತಿರುವುದು
ಸುರಪುರ ತಾಲ್ಲೂಕಿನ ತಿಂಥಣಿ ಗ್ರಾಮ ಪಂಚಾಯಿತಿ ಮತಗಟ್ಟೆ ಸಂಖ್ಯೆ 45ರಲ್ಲಿ ವೃದ್ಧೆಯೊಬ್ಬರು ಮತ ಚಲಾಯಿಸಿ ಮತಕೇಂದ್ರದಿಂದ ಹೊರಬರುತ್ತಿರುವುದು   

ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ 20, 21 ನೇ ಮತಗಟ್ಟೆಯಲ್ಲಿ ಮತದಾನ ಮತ್ತೆ ಆರಂಭವಾಯಿತು.

20 ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆವರೆಗೆ 905 ಮತದಾರರಲ್ಲಿ 207 ಜನ ಮತದಾನ ಮಾಡಿದ್ದರು.

21 ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 15 ನಿಮಿಷ ಮತದಾನ ನಡೆದಿತ್ತು. 690 ಮತದಾರರಲ್ಲಿ 6 ಜನ ಮತದಾನ ಮಾಡಿದ್ದರು. ನಂತರ ಮತದಾರರ ಪಟ್ಟಿ ಗೊಂದಲದಿಂದ ಮತದಾನ ಬಹಿಷ್ಕರಿಸಿದ್ದರು.

ADVERTISEMENT

ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಶಹಾಪುರ ತಾಲ್ಲೂಕು ನೋಡಲ್ ಅಧಿಕಾರಿ ರಾಜು ಗ್ರಾಮಕ್ಕೆ ಭೇಟಿ ನೀಡಿ ಮತದಾರರಿಗೆ ತಿಳಿವಳಿಕೆ ನೀಡಿದರು.

ವಾರ್ಡ್ ಸಂಖ್ಯೆ ಮೂರರಲ್ಲಿ 1,200 ಕ್ಕಿಂತ ಹೆಚ್ಚು ಮತದಾರರಿದ್ದರು. ಹೀಗಾಗಿ ಹೆಚ್ಚುವರಿ ಬೂತ್ ಗಳನ್ನು ಮಾಡಿದ್ದರು. ಇದನ್ನು ಖಂಡಿಸಿ ಮತದಾನ ಬಹಿಷ್ಕಾರ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.