ADVERTISEMENT

₹ 5 ಸಾವಿರ ಲಂಚ ಪಡೆಯುವ ವೇಳೆ ಗುರುಮಠಕಲ್‌ ತಹಶೀಲ್ದಾರ್ ಎಸಿಬಿ ಬಲೆಗೆ

₹15 ಸಾವಿರಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 11:47 IST
Last Updated 22 ಫೆಬ್ರುವರಿ 2021, 11:47 IST
ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ಧ ತಹಸೀಲ್ದಾರ್
ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ಧ ತಹಸೀಲ್ದಾರ್   

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ತಹಶೀಲ್ದಾರ್ ಸಂಗಮೇಶ ಜಿಡಗಿ ಕಚೇರಿಯಲ್ಲಿ ₹5 ಸಾವಿರ ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ಪಡೆಯ (ಎಸಿಬಿ) ಬಲೆಗೆ ಸೋಮವಾರ ಬಿದ್ದಿದ್ದಾರೆ.

‘ದೂರುದಾರ ದೊಡ್ಡ ಬನ್ನಪ್ಪ ಅವರ ತಂದೆಯ ಹೆಸರಿನಲ್ಲಿದ್ದ ಹೊಲವನ್ನು ಮಗನ ಹೆಸರಿಗೆ ವರ್ಗಾವಣೆ ಮಾಡಲು ತಹಶೀಲ್ದಾರ್‌ ₹15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ಸೋಮವಾರ ₹5 ಸಾವಿರ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ’ ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಎಸಿಬಿ ಎಸ್‌ಪಿ ಮಹೇಶ ಮೇಘಣ್ಣನವರ, ಡಿವೈಎಸ್ಪಿ ಉಮಾಶಂಕರ, ಇನ್‌ಸ್ಪೆಕ್ಟರ್‌ ಗುರುಪಾದ ಬಿರಾದಾರ, ಸಿಬ್ಬಂದಿ ಶರಣ ಬಸವ, ಗುತ್ತಪ್ಪಗೌಡ, ಮರೆಪ್ಪ, ವಿಜಯಕುಮಾರ, ಅಮರನಾಥ, ರವಿ, ಈರಣ್ಣ, ಸಾಬಣ್ಣ ದಾಳಿ ವೇಳೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.