ADVERTISEMENT

ಹಾಲಗೇರಾ: ಸಂಭ್ರಮದಿಂದ ಜರುಗಿದ ಯಲ್ಲಮ್ಮದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:39 IST
Last Updated 2 ಫೆಬ್ರುವರಿ 2026, 2:39 IST
ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದ ಯಲ್ಲಮ್ಮದೇವಿಯ ಜಾತ್ರೆಯ ರಥೋತ್ಸವವು ಭಕ್ತ ಸಾಗರದ ನಡುವೆ ಸಂಭ್ರಮದಿಂದ ಜರುಗಿತು
ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದ ಯಲ್ಲಮ್ಮದೇವಿಯ ಜಾತ್ರೆಯ ರಥೋತ್ಸವವು ಭಕ್ತ ಸಾಗರದ ನಡುವೆ ಸಂಭ್ರಮದಿಂದ ಜರುಗಿತು   

ವಡಗೇರಾ: ತಾಲ್ಲೂಕಿನ ಪ್ರಸಿದ್ಧ ಐತಿಹಾಸಿ ಕ್ಷೇತ್ರವಾದ ಹಾಲಗೇರಾ ಗ್ರಾಮದ ಆದಿಶಕ್ತಿ ಹಾಗೂ ಗ್ರಾಮದೇವತೆಯಾದ ಯಲ್ಲಮ್ಮದೇವಿಯ ಜಾತ್ರೆಯ ರಥೋತ್ಸವವು ರವಿವಾರ ಭಾರತ ಹುಣ್ಣಿಮೆಯ ದಿನದಂದು ಸಂಜೆ 5.40ಕ್ಕೆ ಭಕ್ತರ ಜಯ ಘೋಷದೊಂದಿಗೆ ಅತ್ಯಂತ ಸಂಭ್ರಮದಿಂದ ಜರುಗಿತು.

ಇದಕ್ಕೂ ಮುಂಚೆ ರಥಕ್ಕೆ ಫಲ ಪುಷ್ಪ ಹೂವು ಹಣ್ಣುಗಳಿಂದ ಅಲಂಕರಿಸಲಾಗಿತ್ತು. ರಥಕ್ಕೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಕಬ್ಬಿನ ತುಣುಕುಗಳನ್ನು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು .

ರಥೋತ್ಸವದ ನಂತರ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ದೇವಾಲಯದ ಸಮಿತಿಯವರು ಆಯೋಜಿಸಿದ್ದರು.

ADVERTISEMENT

ದೇವಿಯ ಜಾತ್ರೆಗೆ ಆಂಧ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಹಾಗೂ ಸುತ್ತ ಮುತ್ತಲಿನ ಭಕ್ತರಲ್ಲದೆ ಜಿಲ್ಲೆಯ ವಿವಿಧ ರಾಜಕೀಯ ಪಕ್ಷದ ಜನಪ್ರತಿನಿಧಿಗಳು, ಗ್ರಾಮದ ಮುಖಂಡರು ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಆಗಮಿಸಿದ್ದರು

ಜಾತ್ರೆಯಲ್ಲಿ ಕುಂಕುಮ, ಅರಿಸಿಣ, ಬೆಲ್ಲದ ಜಿಲೇಬಿ, ಖಾರಾ ಭಜಿ, ಬೆಂಡು, ಬತಾಸು, ಮಂಡಾಳು ಖರೀದಿ ಹಾಗೂ ಮಕ್ಕಳ ಆಟಿಕೆ ಸಾಮಾನುಗಳ ವ್ಯಾಪಾರ ಜೋರಾಗಿತ್ತು. ಜಾತ್ರೆಗೆ ಪಾಲಕರೊಂದಿಗೆ ಬಂದ ಮಕ್ಕಳು ಪಾಲಕರ ಬುದ ಮೇಲೆ ಕುಳಿತುಕೊಂಡು ರಥೋತ್ಸವದ ಆನಂದವನ್ನು ಸವಿದರು.

ಜಾತ್ರೆಯಲ್ಲಿ ಅಹಿತರ ಘಟನೆಗಳು ಜರುಗದಂತೆ, ಸುಗಮ ಸಂಚಾರಕ್ಕೆ ತೊಂದರೆಯಾದಂತೆ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಮಹೆಬೂಬ ಅಲಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.