ವಡಗೇರಾ: ಕೃಷ್ಣಾ ನದಿಯ ದಡದಲ್ಲಿ ಮೇಕೆ ಮತ್ತು ಹಸು ಮೇಯಿಸುತ್ತಿದ್ದಾಗ ನೀರು ಕುಡಿಯಲು ನದಿಗೆ ಇಳಿದಿದ್ದ ತಾಲ್ಲೂಕಿನ ಶಿವಪುರ ಗ್ರಾಮದ ಭೀಮಾಶಂಕರ ರುಕ್ಮಣ್ಣ (25) ಅವರ ಮೇಲೆ ಸೋಮವಾರ ಸಂಜೆ ಮೊಸಳೆ ದಾಳಿ ಮಾಡಿದೆ.
ದಾಳಿಗೆ ಬಲಗೈ ಸಂಪೂರ್ಣವಾಗಿ ತುಂಡಾಗಿದ್ದು, ಮೈತುಂಬ ಗಾಯಗಳಾಗಿವೆ. ತುಂಡಾದ ಕೈಯನ್ನು ಮೊಸಳೆ ಎಳೆದುಕೊಂಡು ನೀರಿನಲ್ಲಿ ಹೋಗಿದೆ. ಮೊಸಳೆ ದಾಳಿಗೆ ಒಳಗಾದ ಭೀಮಾಶಂಕರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅರಣ್ಯಾಧಿಕಾರಿ ಹಾಗೂ ವಡಗೇರಾ ಪೊಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.