
ಯಾದಗಿರಿ: ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ಯಶಸ್ವಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಾಡಿಯಾ ಸೂಚಿಸಿದರು.
ನಗರದಲ್ಲಿ ಶುಕ್ರವಾರ ಜರುಗಿದ ಕುಷ್ಟರೋಗ ಮತ್ತೆಹಚ್ಚುವ ಆಂದೋಲನದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ನವೆಂಬರ್ 14ವರೆಗೆ ಹದಿನಾಲ್ಕು ದಿನಗಳು ಜರುಗುವ ಆಂದೋಲನದಲ್ಲಿ ಜಿಲ್ಲೆಯಾಧ್ಯಂತ ಕಾರ್ಯಕ್ರಮ ಆಯೋಜಿಸಿ, ಜನತೆಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
ರೋಗ ಲಕ್ಷಣ, ಚರ್ಮರೋಗ ತಪಾಸಣೆ, ರೋಗಕ್ಕೆ ಚಿಕಿತ್ಸೆ, ಪರಿಹಾರ ಕ್ರಮ, ವಿದ್ಯಾರ್ಥಿಗಳಲ್ಲಿ ಚರ್ಮರೋಗ ತಪಾಸಣೆ ನಡೆಸುವುದು, ಕರಪತ್ರಗಳು, ಭಿತ್ತಿ ಪತ್ರಗಳ ಮೂಲಕ ಜಾಗೃತಿ ಮೂಡಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ 87542 ಮನೆಗಳಿದ್ದು, 313 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ತಲಾ ಒಬ್ಬರು ಆಶಾ ಮತ್ತು ಪುರುಷ ಸ್ವಯಂಸೇವಕರಿರುತ್ತಾರೆ.10 ತಂಡಕ್ಕೊಬ್ಬರು ಮೇಲ್ವಿಚಾರಕರು ಇರಲಿದ್ದಾರೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಪದ್ಮಾನಂದ ಗಾಯಕ್ವಾಡ ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದರ, ಆರ್.ಸಿ.ಎಚ್.ಒ. ಡಾ.ಮಲ್ಲಪ್ಪ ಕೆ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಾಜೀದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜ್ಯೋತಿ ಕಟ್ಟಿಮನಿ, ಡಾ.ಕುಮಾರ ಅಂಗಡಿ, ಟಿಎಚ್ಒಗಳಾದ ಡಾ.ರಮೇಶ ಗುತ್ತೇದಾರ, ಡಾ.ಹಣಮಂತರಡ್ಡಿ, ಡಾ.ಆರ್.ವಿ ನಾಯಕ್ ಸೇರಿದಂತೆ ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.