ADVERTISEMENT

ಹಿಜಾಬ್ ವಿವಾದ: ಶಾಲೆಗೆ ಆಗಮಿಸಿದ ಬಿಇಒಗೆ ಮುತ್ತಿಗೆ ಹಾಕಿದ ಪಾಲಕರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 10:29 IST
Last Updated 15 ಫೆಬ್ರುವರಿ 2022, 10:29 IST
ಶಹಾಪುರ ತಾಲ್ಲೂಕಿನ ಗೋಗಿ ಠಾಣೆಯ ಸಿಪಿಐ ಚನ್ನಯ್ಯ ಹಿರೇಮಠ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತುಕತೆ ನಡೆಸಿದರು
ಶಹಾಪುರ ತಾಲ್ಲೂಕಿನ ಗೋಗಿ ಠಾಣೆಯ ಸಿಪಿಐ ಚನ್ನಯ್ಯ ಹಿರೇಮಠ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತುಕತೆ ನಡೆಸಿದರು   

ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಗೋಗಿ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಪಾಲಕರು ಒತ್ತಾಯಿಸಿದ್ದಾರೆ.

ಶಹಾಪುರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ ಅವರು ಶಾಲೆಗೆ ಭೇಟಿ ನೀಡಿದ್ದವೇಳೆ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯುವಂತೆ ಸೂಚಿಸಿದ್ದಾರೆ. ಈ ವಿಚಾರ ತಿಳಿದು ಶಾಲೆ ಬಳಿ ಜಮಾಯಿಸಿದ ಪೋಷಕರು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಏರು ಧ್ವನಿಯಲ್ಲಿ ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದಬಿಇಒ, ಹೈಕೋರ್ಟ್ ಮಧ್ಯಂತರಆದೇಶ ಪಾಲನೆ ಮಾಡಬೇಕಾಗಿದೆ. ಶಿಕ್ಷಣ ಇಲಾಖೆಯ ಸುತ್ತೊಲೆ ಪಾಲನೆ ಮಾಡಬೇಕು. ಹಿಜಾಬ್ ತೆಗೆಯದಿದ್ದರೆ ವಾಪಾಸ್ ಹೋಗಿ ಎಂದು ತಿಳಿಸಿದರು.

ADVERTISEMENT

ಈ ವಿಚಾರವಾಗಿ ಸುಮಾರು 2 ಗಂಟೆವಾಗ್ವಾದ ನಡೆಯಿತು.

ಗೋಗಿ ಠಾಣೆ ಸಿಪಿಐ ಚನ್ನಯ್ಯ ಹಿರೇಮಠ ಶಾಲೆಗೆ ಆಗಮಿಸಿ ಪರಿಸ್ಥಿತಿ ತಹಬಂದಿಗೆ ತಂದರು. ನಂತರ ಪಾಲಕರು ಮನೆಗೆ ತೆರಳಿದರು.

ಶಾಲೆಗೆ ದಾಖಲಾಗಿರುವ 195 ವಿದ್ಯಾರ್ಥಿಗಳ ಪೈಕಿಮಂಗಳವಾರ 70 ಮಂದಿ ಮಾತ್ರವೇ ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.