ADVERTISEMENT

ಕೆಂಭಾವಿ: ಸಗರನಾಡಿನ ಸಂಗೀತ ಪ್ರತಿಭೆ

ಹಿಂದೂಸ್ಥಾನಿ ಗಾನ ಲೋಕದಲ್ಲಿ ಛಾಪುಮೂಡಿಸಿದ ಶರಣಕುಮಾರ ಯಾಳಗಿ

ಪವನ ಕುಲಕರ್ಣಿ
Published 5 ನವೆಂಬರ್ 2023, 6:08 IST
Last Updated 5 ನವೆಂಬರ್ 2023, 6:08 IST
<div class="paragraphs"><p>ಮೈಸೂರಿನಲ್ಲಿ ಇತ್ತೀಚೆಗೆ ನಡೆದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಸಂಗೀತ ಸೇವೆ ನೀಡಿದ ಶರಣಕುಮಾರ</p></div>

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಸಂಗೀತ ಸೇವೆ ನೀಡಿದ ಶರಣಕುಮಾರ

   

ಕೆಂಭಾವಿ: ಸಂತ, ಶರಣರ ಸಗರನಾಡಿನಲ್ಲಿ ಗ್ರಾಮೀಣ ಗಾನ ಪ್ರತಿಭೆಯೊಂದು ಸಂಗೀತ ಲೋಕದಲ್ಲಿ ಸದ್ದಿಲ್ಲದೇ ಅರಳುತ್ತಿದೆ.

ಪಟ್ಟಣ ಸಮೀಪದ ಯಾಳಗಿ ಗ್ರಾಮದ ಶರಣಕುಮಾರ ಭಜಂತ್ರಿ ಹಿಂದೂಸ್ಥಾನಿ ಗಾಯಕರಾಗಿ ಸಂಗೀತ ಸೇವೆ ನೀಡುತ್ತಾ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.

ADVERTISEMENT

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂ.ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾಗಿ, ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿದ್ದು, ನಾಡಿನ ಹಲವಾರು ಮಠ ಮಾನ್ಯಗಳು, ಸಂಘ ಸಂಸ್ಥೆಗಳಿಂದ ಗಾನ ಸುಧಾಕರ, ಸಂಗೀತ ಭಾಸ್ಕರ, ಗಾನ ರತ್ನ ಹೀಗೆ ಹತ್ತಾರು ಪುರಸ್ಕಾರಗಳು ಮುಡಿಗೇರಿವೆ.

ಇತ್ತೀಚೆಗೆ ಮೈಸೂರಿನ ದಸರಾ ಮಹೋತ್ಸವ, ಕಿತ್ತೂರು ಉತ್ಸವದಲ್ಲಿ ಸಂಗೀತ ಸೇವೆ ನೀಡಿರುವ ಶರಣಕುಮಾರ ಭಜಂತ್ರಿ ಅವರು ಪುರಾಣ, ಪ್ರವಚನದಂತಹ ಕಾರ್ಯಕ್ರಮಗಳಲ್ಲಿ ಸಂಗೀತ ಸುಧೆ ಉಣಬಡಿಸುತ್ತಾರೆ. ಸಂಗೀತದ ಆಸಕ್ತಿಯಿರುವ ಹಲವಾರು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುತ್ತಿದ್ದಾರೆ.

ಗ್ರಾಮೀಣ ಪ್ರತಿಭೆಯಾದ ಇವರು ಸುಮಾರು 15 ವರ್ಷಗಳಿಂದ ಜಿಲ್ಲೆ, ಹೊರ ಜಿಲ್ಲೆಗಳು ಸೇರಿದಂತೆ ಗೋವಾ, ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಲ್ಲೂ ಶರಣಕುಮಾರ ಭಜಂತ್ರಿ ತಮ್ಮ ಕಂಠಸಿರಿಯಿಂದ ಸಂಗೀತದ ರಸದೌತಣ ಬಡಿಸಿದ ಹಿರಿಮೆಯನ್ನು ಇವರು ಹೊಂದಿದ್ದಾರೆ. ರಾಜ್ಯಸರ್ಕಾರ ಗ್ರಾಮೀಣ
ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದರೆ ಇನ್ನಷ್ಟು ಪ್ರತಿಭೆಗೆಳು ಹೊರಬರಲು ಪುಷ್ಠಿ ತುಂಬಿದಂತಾಗುತ್ತದೆ.

ಕಲಾ ಸೇವೆಯ ಕುಟುಂಬ

ಶರಣಕುಮಾರ ಯಾಳಗಿಯವರ ತಂದೆ ಹಣಮಂತ್ರಾಯ ಭಜಂತ್ರಿ ಶಹನಾಯಿ ಹಾಗೂ ಬಾನ್ಸೂರಿಯಲ್ಲಿ ಹೆಸರು ಮಾಡಿದ ರಂಗ ಕಲಾವಿದರು. ಅಣ್ಣ ಯಮನೇಶ ಕೂಡ ತಬಲಾ ಮಾಂತ್ರಿಕರಾಗಿ ಗುರುತಿಸಿಕೊಂಡವರು. ಇನ್ನೊಬ್ಬ ಸಹೋದರ ಕೂಡ ಗಾಯನದಲ್ಲಿಯೇ ಮುಂದುವರಿಯುತ್ತಿದ್ದು ಇವರ ಸಂಗೀತ ಸಾಧನೆಗೆ ಕುಟುಂಬದ ಹಿನ್ನೆಲೆ ಕೂಡ ಸಾಥ್ ನೀಡಿದೆ ಎನ್ನುತ್ತಾರೆ ಯಾಳಗಿ ಸಹೋದರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.