
ಸುರಪುರ: ‘ತಾಲ್ಲೂಕು ಶಾಂತಿ-ಸೌಹಾರ್ದತೆಗೆ ಹೆಸರಾಗಿದೆ. ಮಾ.3 ರಂದು ಹೋಳಿ ಹಬ್ಬವಿದ್ದು ಹಬ್ಬದ ಆಚರಣೆಯನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು’ ಎಂದು ಡಿವೈಎಸ್‍ಪಿ ಜಾವೇದ್ ಇನಾಮದಾರ ಹೇಳಿದರು.
ಪೊಲೀಸ್ ಠಾಣೆಯಲ್ಲಿ ಶನಿವಾರ ಜರುಗಿದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ಮಾ. 2 ರಂದು ರಾತ್ರಿ ಕಾಮ ದಹನ ಇರುತ್ತದೆ. ಮರುದಿನ ಬೆಳಿಗ್ಗೆ ಹೋಳಿ ಇದ್ದು ಅಂದು ದ್ವಿತೀಯ ಪಿಯುಸಿ ಪರೀಕ್ಷೆ ಸಹ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಬಣ್ಣದಾಟ ಆಡಬೇಕು’ ಎಂದು ತಿಳಿಸಿದರು.
‘ಬಣ್ಣ ಎರೆಚಾಟದ ನೆಪದಲ್ಲಿ ಬೈಕ್‍ಗಳನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುವುದು, ಒತ್ತಾಯದಿಂದ ಬಣ್ಣ ಎರಚುವುದು, ತತ್ತಿ ಎಸೆಯುವುದು ಇವು ಶಿಕ್ಷಾರ್ಹ ಅಪರಾಧ. ಆಯಿಲ್ ಪೇಂಟ್ಸ್ ಬಳಿಸುವಂತಿಲ್ಲ. ನೈಸರ್ಗಿಕವಾದ ಸಾಮಾನ್ಯ ಬಣ್ಣವನ್ನೇ ಬಳಸಬೇಕು. ರಂಜಾನ್ ತಿಂಗಳು ನಡೆಯುತ್ತಿದ್ದು ಮುಸ್ಲಿಂ ಸಮಾಜದವರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು ಮತ್ತು ಮುಸ್ಲಿಂರೂ ಇದಕ್ಕೆ ಸಹಕರಿಸಬೇಕು’ ಎಂದರು.
ಪಿಐ ಉಮೇಶ ನಾಯಕ ಮಾತನಾಡಿದರು. ಮುಖಂಡರಾದ ಮಲ್ಲಿಕಾರ್ಜುನ ಕ್ರಾಂತಿ, ಉಸ್ತಾದ್ ವಜಾಹತ್ ಹುಸೇನ್, ವೆಂಕಟೇಶ ಬೇಟೆಗಾರ ಇನ್ನಿತರರರು ಮಾತನಾಡಿದರು.
ಪ್ರಮುಖರಾದ ರಮೇಶ ದೊರೆ ಆಲ್ದಾಳ, ವೆಂಕಟೇಶ ನಾಯಕ ಬೈರಿಮಡ್ಡಿ, ಶಿವಲಿಂಗ ಹಸನಾಪುರ, ಶರಣುನಾಯಕ ದಿವಳಗುಡ್ಡ, ಚಂದ್ರಶೇಖರ ಗೋಗಿ, ಹಂಪಯ್ಯ ಹಿರೇಮಠ, ಮೂರ್ತಿ ಬೊಮ್ಮನಳ್ಳಿ, ಮಾನಪ್ಪ ಶೆಳ್ಳಗಿ, ಆನಂದ ಕಟ್ಟಿಮನಿ, ಬಸವರಾಜ ದೊಡ್ಡಮನಿ, ಮಲ್ಲಪ್ಪ, ಮಲ್ಲಿಕಾರ್ಜುನ ಸೇರಿ ಇನ್ನಿತರರಿದ್ದರು. ಕಾನ್‍ಸ್ಟೇಬಲ್ ದಯಾನಂದ ಜಮಾದಾರ ನಿರೂಪಿಸಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.