ADVERTISEMENT

ಹಾಲೋಕಳಿ ಜಾತ್ರೆ; ಭಕ್ತರ ಸಂಖ್ಯೆ ವಿರಳ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 16:38 IST
Last Updated 1 ಸೆಪ್ಟೆಂಬರ್ 2021, 16:38 IST
ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಭಕ್ತರ ಸಂಖ್ಯೆ ವಿರಳವಾಗಿತ್ತು
ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಭಕ್ತರ ಸಂಖ್ಯೆ ವಿರಳವಾಗಿತ್ತು   

ಸುರಪುರ: ನಗರದ ಪ್ರಸಿದ್ಧ ವೇಣುಗೋಪಾಲಸ್ವಾಮಿ ಜಾತ್ರೆಯ (ಹಾಲೋಕಳಿ) ಮೂರನೇ ದಿನವಾದ ಬುಧವಾರ ಭಕ್ತರ ಸಂಖ್ಯೆ ವಿರಳವಾಗಿತ್ತು. ಬೆಳಿಗ್ಗೆ ದೇವಸ್ಥಾನಕ್ಕೆ ಅಗಮಿಸುವರ ಸಂಖ್ಯೆ ತುಸು ಹೆಚ್ಚಾಗಿ, ಕ್ರಮೇಣ ತಗ್ಗಿತು.

ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಆಗಲೂ ಹೆಚ್ಚಿನ ಭಕ್ತರು ಇರಲಿಲ್ಲ. ಜಾತ್ರೆಯ ಪ್ರಮುಖ ಆಕರ್ಷಣೆಯಾದ ದೇವರ ಕಂಬಾರೋಹಣಕ್ಕೆ ಮಂಗಳವಾರದಂದು ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಜನರು ಜಮಾವಣೆಗೊಂಡಿದ್ದರು.

ಜಾತ್ರೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಆಗದಿರುವುದು ಕಂಡುಬಂತು. ಎರಡು ಗಂಟೆಯಲ್ಲಿ ಕಂಬಾರೋಹಣ ಮುಗಿದು ಜನರು ಕರಗಿದ್ದು, ಕಂಡು ಪೊಲೀಸರು ನಿರಾಳರಾದರು.

ADVERTISEMENT

ಬುಧವಾರ ಬೆಳಿಗ್ಗೆ ನಡೆಯಬೇಕಾಗಿದ್ದ ಕುಸ್ತಿ ಪಂದ್ಯ ಹಾಗೂ ಸಂಜೆಯ ರಣ ಕಂಬಾರೋಹಣ ರದ್ದು ಪಡಿಸಲಾಗಿತ್ತು. ಕೆಲವೇ ಜನರು ದೇವರ ದರ್ಶನ ಮಾಡಿ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.