
ಪ್ರಜಾವಾಣಿ ವಾರ್ತೆ
ಹುಣಸಗಿ: ಪಟ್ಟಣದಲ್ಲಿರುವ ಯುಕೆಪಿ ಕ್ಯಾಂಪಿನ ಅಯ್ಯಪ್ಪ ಸನ್ನಿಧಿಯಲ್ಲಿ ಮಕರ ಜ್ಯೋತಿ ಶರಣಂ ಅಯ್ಯಪ್ಪ ಭಕ್ತ ವೃಂದದಿಂದ 31ನೇ ಮಹಾಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಇಲ್ಲಿನ ನೀಲಕಂಠೇಶ್ವರ ದೇವಸ್ಥಾನದಿಂದ ಅಯ್ಯಪ್ಪ ಸನ್ನಿಧಿ ವರೆಗೆ ಜ್ಯೋತಿಯ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಶಬರಿಮಲೆ ಅಯ್ಯಪ್ಪಸ್ವಾಮಿ ವೃತಧಾರಿಗಳಿಂದ ಭಕ್ತಿಯಿಂದ ದೇವರ ಮಹಾಪೂಜೆ ನಡೆಯಿತು.
ಕಳೆದ ಒಂದು ತಿಂಗಳಿನಿಂದ ಮಾಲಧಾರಿಗಳಾದ ಅಯ್ಯಪ್ಪ ಭಕ್ತರು ಅಯ್ಯಪ್ಪನ ಭಕ್ತಿ ಗೀತೆಗಳನ್ನು ಭಜಿಸುತ್ತಾ ಆರಾಧಿಸಿದರು. ವಿಶೇಷ ಪೂಜೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಭಕ್ತರಿಗಾಗಿ ಅನ್ನ ಸಂತರ್ಪಣೆ ಕಾರ್ಯ ಆಯೋಜಿಸಲಾಗಿತ್ತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.