ಹುಣಸಗಿ: ‘ನಮ್ಮ ಬ್ಯಾಂಕ್‌ನ ಹುಣಸಗಿ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದ ಗುಳಬಾಳ ಗ್ರಾಮದ ರಾಮಬಾಬು ಡಿಸೆಂಬರ್ ತಿಂಗಳಲ್ಲಿ ಅಪಘಾತವಾಗಿ ಮೃತಪಟ್ಟಿದ್ದರು. ಅವರು ಕೆಬಿಎಲ್ ಸುರಕ್ಷಾ ವಿಮಾ ಪಾವತಿಸಿದ್ದರು. ಇದರಿಂದ ಅವರ ಖಾತೆಗೆ ₹10 ಲಕ್ಷ ಜಮೆ ಮಾಡಲಾಗಿದೆ’
ಕರ್ನಾಟಕ ಬ್ಯಾಂಕ್ ಕಲಬುರಗಿಯ ರಿಜನಲ್ ಮ್ಯಾನೇಜರ್ ನಾಗಾರ್ಜುನರಡ್ಡಿ ಹೇಳಿದರು.
ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಖಾಧಿಕಾರಿ ನಾಗರಾಜ ಮಾತನಾಡಿ, ‘ಈ ಗ್ರಾಹಕರು ಪ್ರಧಾನ ಮಂತ್ರಿ ಜೀವನ ಜ್ಯೋತಿ, ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಕಂತು ಪಾವತಿಸಿದ್ದರು. ಆ ವಿಮಾ ಮೊತ್ತ ಕೂಡಾ ಜಮಾ ಮಾಡಲಾಗಿದೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೃತ ರಾಮಬಾಬು ಪತ್ನಿ ಗೀತಾ, ಮಲ್ಲೇಶಪ್ಪ, ಮಹಮ್ಮದ ಜಿಲಾನಿ, ಅರುಣ ಶಿವಾ, ಸ್ನೇಹಾ ಕುಲಕರ್ಣಿ, ಶ್ರೀನಿವಾಸ, ಶಿವು ದೇಸಾಯಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.