ADVERTISEMENT

ವಿವಿಧೆಡೆ ಶಿಕ್ಷಕರ ದಿನಾಚರಣೆ

ರಾಧಾಕೃಷ್ಣರ ಭಾವಚಿತ್ರಕ್ಕೆ ಪೂಜೆ, ಆದರ್ಶ ಮೈಗೂಡಿಸಿಕೊಳ್ಳಲು ಕರೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 15:31 IST
Last Updated 5 ಸೆಪ್ಟೆಂಬರ್ 2020, 15:31 IST
ಯಾದಗಿರಿಯ ಡಿಡಿಯು ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು
ಯಾದಗಿರಿಯ ಡಿಡಿಯು ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು   

ಯಾದಗಿರಿ:ನಗರದ ವಿವಿಧೆಡೆ ಶನಿವಾರ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಸರ್ವಪಲ್ಲಿ ರಾಧಾಕೃಷ್ಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಗಣ್ಯರು ಕರೆ ನೀಡಿದರು.

ಡಿಡಿಯು ಶಿಕ್ಷಣ ಸಂಸ್ಥೆ: ನಗರದಡಿಡಿಯು ಶಿಕ್ಷಣ ಸೇವಾ ಸಂಸ್ಥೆಯಲ್ಲಿಶಿಕ್ಷಕರ ದಿನಾಚರಣೆ ಅಂಗವಾಗಿ ಎಸ್ಸೆಸ್ಸೆಲ್ಸಿಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಸಂಸ್ಥಾಪಕ ಡಾ.ಭೀಮಣ್ಣ ಮೇಟಿ ಮಾತನಾಡಿ, ಸಮಾಜ ಸುಧಾರಣೆಗೆ ಶಿಕ್ಷಕರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಕೊರೊನಾ ಕಾಲದಲ್ಲೂ ಎದೆಗುಂದದೆಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ, ಕಾಲೇಜಿನ ಪ್ರಾಂಶುಪಾಲ ಸುರೇಶ ಪತ್ತಾರ ಹಾಗೂ ಪಾಲಕ ಪ್ರತಿನಿಧಿಗಳಾದ ವೆಂಕಟರೆಡ್ಡಿ ಗುರಸಣಗಿ, ಅಂಬಿಕಾ ಇದ್ದರು.ವೆಂಕಟೇಶ ಪೂಜಾರಿ ನಿರೂಪಿಸಿದರೆ, ಮಹಿಬೂಬ ಸ್ವಾಗತಿಸಿದರು. ಎಚ್.ಬಿ ಹವಲ್ದಾರ್ ವಂದಿಸಿದರು.

ADVERTISEMENT

ನವನಂದಿ ಶಾಲೆ:ನಗರದ ನವನಂದಿ ಆಂಗ್ಲ ಮಾಧ್ಯಮ ಶಾಲೆಯಲ್ಲಿಶಿಕ್ಷಕರ ದಿನಾಚರಣೆ ಅಂಗವಾಗಿ ಮಾಸ್ಕ್‌ ವಿತರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಬಸವರಾಜ ಶಿವರಾಯ ಎಲ್ಹೇರಿ ಮಾತನಾಡಿ, ದೇಶ ಕಂಡ ಅಪ್ರತಿಮ ಶಿಕ್ಷಣ ತಜ್ಞ, ಚತುರ ರಾಜಕಾರಣಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಆಶಯದಂತೆ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಶಿಕ್ಷಕರು ಪ್ರಾಮಾಣಿಕವಾಗಿ ಬೋಧನೆ ಮಾಡಿದಾಗ ಮಕ್ಕಳ ಭವಿಷ್ಯ ಉಜ್ವವಾಗುತ್ತದೆ ಎಂದರು.

ಶಾಲೆಯ ಮುಖ್ಯಗುರು ರೇವಣಸಿದ್ದಪ್ಪ ಮಲಕೂಡ, ವಿಜಯಲಕ್ಷ್ಮಿ ಪಾಟೀಲ, ಸುರೇಖಾ ರಾಜು, ರೀನಾ ಸೈಮನ್‌ ಇದ್ದರು.

ಆರ್ ವಿ ವಿದ್ಯಾಸಂಸ್ಥೆಯ:ನಗರದಆರ್‌ವಿ ವಿದ್ಯಾಸಂಸ್ಥೆಯಲ್ಲಿ ವೇಬಿನಾರ್ ಮುಖಾಂತರ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈವೇಳೆಸಂಸ್ಥೆಯ ಅಧ್ಯಕ್ಷೆಕಮಲಾ ಎನ್ ದೇವರಕಲ್‍ ಮಾತನಾಡಿ, ಡಾ.ಸರ್ವೆಪಲ್ಲಿ ರಾಧಾಕೃಷ್ಣ ಅವರ 131ನೇ ಹುಟ್ಟಿದ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ಭಾರತ ಕಂಡ ಸರ್ವಶ್ರೇಷ್ಠ ಉಪರಾಷ್ಟ್ರಪತಿ ಅವರನ್ನು ಸ್ಮರಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮತ್ತು ಸಮಾಜವನ್ನು ಸನ್ಮಾರ್ಗದಲ್ಲಿ ಕೊಂಡ್ಯೊಯುವ ದೃಷ್ಟಿಯಿಂದ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ 2020ರ ಶಿಕ್ಷಣ ನೀತಿಯನ್ನು ಶಿಕ್ಷಕರಾದವರು ಸಂಪೂರ್ಣವಾಗಿ ಅರಿತುಕೊಂಡು ಶಿಕ್ಷಣ ನೀತಿಗೆ ಬಧ್ದರಾಗಿ ಮತ್ತು ಸಮಾಜದ ಒಳಿತಿಗಾಗಿ ಬದಲಾವಣೆ ಮಾರ್ಗ ಅನುಸರಿಸುವುದು ಅನಿವಾರ್ಯವಾಗಿದೆಎಂದರು.

ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರ ಎಂನೀಲಂಗಿ ಶಿಕ್ಷಕ ದಿನಾಚರಣೆಯ ಮಹತ್ವ ವಿವರಿಸಿದರು. ಸಂಸ್ಥೆಯ ಪ್ರಾಂಶುಪಾಲ ಸುರೇಶ ಹವಾಲ್ದಾರ, ಶಿಕ್ಷಣ ಕ್ಷೇತ್ರಕ್ಕೆ ಡಾ.ಸರ್ವೆಪಲ್ಲಿ ರಾಧಾಕೃಷ್ಣರವರ ಮತ್ತು ಅವರ ರಾಜಕೀಯ ಜೀವನದ ಕುರಿತಾದ ಮಹತ್ವದ ಸಂಗತಿಗಳನ್ನ ತಿಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.